ಪೊಲೀಸ್ ನೇಮಕಾತಿಯಲ್ಲಿ ಸಹೋದರಿಯರು ಭಾಗಿ: ಸತ್ಯ ಮುಚ್ಚಿಟ್ಟ ಪೇದೆ ಸಸ್ಪೆಂಡ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ನಡೆಯುತ್ತಿರುವ ಪೊಲೀಸ್ ನೇಮಕಾತಿ ಅಭಿಯಾನದಲ್ಲಿ ತನ್ನ ಇಬ್ಬರು ಸಹೋದರಿಯರು ಭಾಗವಹಿಸುತ್ತಿದ್ದಾರೆ ಎಂಬ ಅಂಶವನ್ನು ಅಧಿಕಾರಿಗಳಿಂದ ಮುಚ್ಚಿಟ್ಟ ಆರೋಪದ ಮೇಲೆ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ಮಹಿಳಾ ಕಾನ್‌ಸ್ಟೆಬಲ್ ತನ್ನ ಇಬ್ಬರು ಸಹೋದರಿಯರು ನೇಮಕಾತಿ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಅಂಶವನ್ನು ಮುಚ್ಚಿಟ್ಟಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ನೇಮಕಾತಿ ಸಂದರ್ಭದಲ್ಲಿ ತನ್ನ ಇಬ್ಬರು ಸಹೋದರಿಯರಿಗೆ ಸಹಾಯ ಮಾಡಿದ ಆರೋಪವೂ ಆಕೆಯ ಮೇಲಿದೆ ಎಂದು ಅವರು ಹೇಳಿದರು.

ಇದು ಪೊಲೀಸ್​ ನಿಯಮದ ಪ್ರಕಾರ ಅಪರಾಧವಾಗಿದೆ. ಹೀಗೆ ಒಂದೇ ಕುಟುಂಬದಿಂದ ಭಾಗವಹಿಸುವುದಿದ್ದರೆ ಮೇಲಾಧಿಕಾರಿಗಳಿಗೆ ಮೊದಲೇ ತಿಳಿಸಬೇಕು. ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು. ಆದರೆ ಈ ಕಾನ್​ಸ್ಟೆಬಲ್​ ಕರ್ತವ್ಯಲೋಪ ಎಸಗಿದ್ದೂ ಅಲ್ಲದೇ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read