ಕಾರ್ಮಿಕನ ದೇಹ ಹೊಕ್ಕ ಕಬ್ಬಿಣದ ರಾಡ್;‌ ಎದೆ ನಡುಗಿಸುತ್ತೆ ಫೋಟೋ

ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರೊಬ್ಬರಿಗೆ ಕಬ್ಬಿಣದ ರಾಡ್‌ ಒಂದು ದೇಹಕ್ಕೆ ಹೊಕ್ಕಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಥಾಣೆ ಬಳಿಯ ಬದ್ಲಾಪುರದಲ್ಲಿ ಜರುಗಿದೆ. 26 ವರ್ಷ ವಯಸ್ಸಿನ ಕಾರ್ಮಿಕನ ಸ್ಥಿತಿ ಈಗ ಸ್ಥಿರವಾಗಿದೆ.

ಕಟ್ಟಡದಲ್ಲಿ ತಲೆಯೆತ್ತಲಿದ್ದ ಶಾಪಿಂಗ್ ಮಾಲ್ ಒಂದರಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದ ವೇಳೆ ಇವರಿಗೆ ಹೀಗೆ ಆಗಿದೆ. ಈ ನತದೃಷ್ಟ ಕಾರ್ಮಿಕನ ಹೆಸರು ಸತ್ಯಪ್ರಕಾಶ್ ತಿವಾರಿ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಅನೀಲ್ ಪಡ್ವಾಲ್, “ಈ ಘಟನೆಯು ಥಾಣೇಕರ್‌ ಪಲಾಸಿಯೋ ಹೌಸಿಂಗ್ ಪ್ರಾಜೆಕ್ಟ್ ಬಳಿ ವರದಿಯಾಗಿದೆ. 26 ವರ್ಷದ ಕಾರ್ಮಿಕ ಸತ್ಯಪ್ರಕಾಶ್ ತಿವಾರಿ ಮಾರ್ಟ್ ಹೊರಗೆ ಸಿಸಿ ಟಿವಿ ಕ್ಯಾಮೆರಾ ಅವಳಡಿಸುತ್ತಿದ್ದ ವೇಳೆ, ಶನಿವಾರ ಸಂಜೆ 4:30ರ ವೇಳೆಗೆ ಈ ಘಟನೆ ಜರುಗಿದ್ದು, ಆತನ ಮೇಲೆ 8ನೇ ಮಹಡಿಯಿಂದ ಬಿದ್ದ ಕಬ್ಬಿಣದ ರಾಡ್‌ ಒಂದು ದೇಹಕ್ಕೆ ಹೊಕ್ಕಿದೆ. ದಾರಿಹೋಕರೊಬ್ಬರು ತಿವಾರಿರನ್ನು ಚಿಕಿತ್ಸೆಗೆಂದು ಕೂಡಲೇ ಹತ್ತಿರದ ನಿರ್ಮಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಪರಿಸ್ಥಿತಿ ಈಗ ಸ್ಥಿರವಾಗಿದೆ,” ಎಂದು ತಿಳಿಸಿದ್ದಾರೆ.

“ಈ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಪ್ರಕರಣ ದಾಖಲಾಗುತ್ತಲೇ ನಾವು ಕ್ರಮ ತೆಗೆದುಕೊಳ್ಳುತ್ತೇವೆ,” ಎಂದು ಪಡ್ವಾಲ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read