
ಥಾಣೆ: ಪರೀಕ್ಷೆಯಲ್ಲಿ ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂಬ ಆಶಯ ಪ್ರತಿಯೊಬ್ಬ ಪೋಷಕರಲ್ಲಿಯೂ ಇರುತ್ತದೆ. ಪರೀಕ್ಷಾ ಫಲಿತಾಂಶ ಬಂದಾಗ ಟಾಪರ್ ಗಳ ಬಗ್ಗೆ ಅವರ ಸಾಧನೆಗಳ ಬಗ್ಗೆಯೇ ಚರ್ಚೆ ನಡೆಯುತ್ತದೆ. ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವ ಖುಷಿಯಲ್ಲಿ ಪೋಷಕರು ಸಂಭ್ರಮಾಚರಣೆ ಮಾಡುತ್ತಾರೆ. ಆದರೆ ಇಲ್ಲೊಂದು ಕುಟುಂಬ ತಮ್ಮ ಮಗ ಎಲ್ಲಾ ವಿಷಯಗಳಲ್ಲಿಯೂ ಜಸ್ಟ್ ಪಾಸ್ ಆಗಿದ್ದಕ್ಕೆ ಭರ್ಜರಿ ಸಂಭ್ರಮಾಚರಣೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ಹಂಚಿಕೊಂಡಿರುವ ವಿಶಿಷ್ಟ ಘಟನೆ ನಡೆದಿದೆ.
ಮಹಾರಾಷ್ಟ್ರದ ಥಾಣೆಯಲ್ಲಿರುವ ಕೊಳಗೇರಿಯಲ್ಲಿ ವಾಸವಾಗಿರುವ ಬಡ ಕುಟುಂಬದ ಬಾಲಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ 6 ಸಬ್ಜಕ್ಟ್ ಗಳಲ್ಲಿ ತಲಾ 35 ಅಂಕಗಳನ್ನು ಪಡೆದಿದ್ದು, ಮಗ ಪಾಸಾಗಿರುವುದೇ ದೊಡ್ಡ ವಿಷಯವೆಂದು ಪೋಷಕರು ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಮರಾಠಿ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿಶಾಲ್ ಕರಾಡ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ಆರು ವಿಷಯಗಳಲ್ಲಿ ಜಸ್ಟ್ ಪಾಸ್. ತಲಾ 35 ಅಂಕಗಳನ್ನು ಪಡೆದಿದ್ದಾನೆ. ಕುಟುಂಬದ ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ವಿಶಾಲ್ ಕಷ್ಟಪಟ್ಟು ಓದಿ ಜಸ್ಟ್ ಪಾಸಾಗಿದ್ದು, ಕುಟುಂಬದಲ್ಲಿ ಸಂತಸ ಮೂಡಿದೆ. ಕೇವಲ 35 ಅಂಕಗಳನ್ನು ಪಡೆದು ಇಡೀ ಊರಿಗೆ ಮನೆ ಮಾತಾಗಿ ಮಗ ವಿಶಾಲ್ ಗಮನ ಸೆಳೆದಿರುವುದು ಸಂತಸ ತಂದಿದೆ. ಆತ ಇನ್ನಷ್ಟು ಚೆನ್ನಾಗಿ ಓದಬೇಕು ಎಂದು ಪೋಷಕರು ಖುಷಿ ಹಂಚಿಕೊಂಡಿದ್ದಾರೆ.

 
		 
		 
		 
		 Loading ...
 Loading ... 
		 
		 
		