ಸೆಕ್ಸ್​ ರ್ಯಾಕೆಟ್​: ಮಹಿಳೆ ಅರೆಸ್ಟ್‌ – ಮೂವರು ಯುವತಿಯರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆಯ ಕಾಸರವಾಡವಲಿ ಪ್ರದೇಶದಲ್ಲಿ ಸೆಕ್ಸ್ ರ್ಯಾಕೆಟ್ ಭೇದಿಸಿದ ನಂತರ 46 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಈ ಕುರಿತು ಅಪರಾಧ ವಿಭಾಗದ ಘಟಕ-5 ರ ಹಿರಿಯ ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಯುವತಿಯರನ್ನು ರಕ್ಷಿಸಲಾಗಿದೆ.

ಥಾಣೆ ಅಪರಾಧ ವಿಭಾಗದ ಘಟಕ-5ರ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಕಾಸ್ ಘೋಡ್ಕೆ ಮಾತನಾಡಿ, “ಥಾಣೆಯ ಕಾಸರ್ವದವಲಿಯಲ್ಲಿರುವ ಹೈಪರ್ ಸಿಟಿ ಮಾಲ್‌ನಲ್ಲಿ ಸೆಕ್ಸ್​ ದಂಧೆ ನಡೆಯುತ್ತಿದೆ ಎಂದು ನಮಗೆ ಸುಳಿವು ಸಿಕ್ಕಿತ್ತು. ಅದರಂತೆ ನಾವು ಗ್ರಾಹಕ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಕಳುಹಿಸಿದ್ದೆವು.

ಅಲ್ಲಿ ಸೆಕ್ಸ್ ದಂಧೆ ಸಕ್ರಿಯವಾಗಿರುವುದನ್ನು ದೃಢಪಡಿಸಲಾಯಿತು. ನಮ್ಮ ತಂಡವು ಕಳೆದ ಶನಿವಾರ ರಾತ್ರಿ 11:45 ರ ಸುಮಾರಿಗೆ ಸ್ಥಳಕ್ಕೆ ದಾಳಿ ನಡೆಸಿ ವಿಲೆ ಪಾರ್ಲೆ ನಿವಾಸಿ ಮನೀಶಾ ಪರಶುರಾಮ್ ಪಾಂಚಾಲ್ (46) ಎಂಬ ಮಹಿಳೆಯನ್ನು ಬಂಧಿಸಿದೆ.

ಪಾಂಚಾಲ್ ಕಳುಹಿಸುತ್ತಿದ್ದ ಮೂವರು ಯುವತಿಯರನ್ನು ರಕ್ಷಿಸಿದ್ದೇವೆ ಎಂದಿದ್ದಾರೆ. ಮಹಿಳೆ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read