ನೀರಿನ ಮಧ್ಯದಲ್ಲಿ ರೈಲು ಪ್ರಯಾಣ ಮಾಡುತ್ತಿದ್ದರೆ ಒಂಥರಾ ರೋಮಾಂಚನವುಂಟಾಗುತ್ತದೆ. ಥೈಲ್ಯಾಂಡ್‌ನ ಈ ‘ತೇಲುವ ರೈಲು’ ಮಾರ್ಗದಲ್ಲಿನ ಪ್ರಯಾಣವನ್ನು ಕೆಲವು ಪ್ರಯಾಣಿಕರು ಸ್ಟುಡಿಯೋ ಘಿಬ್ಲಿ ಚಲನಚಿತ್ರದ ದೃಶ್ಯದಂತೆ ವಿವರಿಸಿದ್ದಾರೆ.
ರೈಲು ನೀರಿನ ಮಧ್ಯೆ ಪ್ರಯಾಣ ಬೆಳೆಸುತ್ತಿದ್ದಂತೆ, ಪ್ರಯಾಣಿಕರು ಥ್ರಿಲ್ ಆಗಿದ್ದಾರೆ. ಸೆಲ್ಫಿ ಕ್ಲಿಕ್ಕಿಸುತ್ತಾ ಆನಂದಿಸಿದ್ದಾರೆ. ಮಾರ್ಗಮಧ್ಯೆ ರೈಲು ನಿಂತಾಗ ಕಿರಿದಾದ ಸೇತುವೆಯ ಮೇಲೆ ಇಳಿದ ಪ್ರಯಾಣಿಕರು ಫೋಟೋ ಕ್ಲಿಕ್ಕಿಸುತ್ತಾ, ಸೌಂದರ್ಯವನ್ನು ಆಹ್ಲಾದಿಸುತ್ತಾ ಖುಷಿಪಟ್ಟಿದ್ದಾರೆ.
ದೇವಾಲಯಗಳು ಮತ್ತು ಕಡಲತೀರಗಳಿಗೆ ಭೇಟಿ ನೀಡುವ ಜನಸಮೂಹದಿಂದ ದೂರವಿರುವ ಪ್ರಯಾಣವನ್ನು ಪ್ರಯಾಣಿಕರು ಆನಂದಿಸುತ್ತಾ ಸಾಗಿದ್ದಾರೆ.
ನೂರಾರು ಪ್ರಯಾಣಿಕರು ಸೂರ್ಯೋದಯಕ್ಕೆ ಮುಂಚಿತವಾಗಿ ಬ್ಯಾಂಕಾಕ್‌ನ ಶತಮಾನದಷ್ಟು ಹಳೆಯದಾದ ಹುವಾ ಲ್ಯಾಂಫಾಂಗ್ ನಿಲ್ದಾಣದಲ್ಲಿ ರೈಲು ಹತ್ತಿದ್ರು. ತಾವರೆಯ ಕೊಳಗಳು, ಕಾಡುಗಳು, ದೇವಾಲಯಗಳು ಮತ್ತು ಭತ್ತದ ಗದ್ದೆಗಳನ್ನು ವೀಕ್ಷಿಸುತ್ತಾ, ನೈಸರ್ಗಿಕ ಎಸಿ ತೆಗೆದುಕೊಳ್ಳುತ್ತಾ, ಫೋಟೋಗಳನ್ನು ಕ್ಲಿಕ್ಕಿಸುತ್ತಾ ಪ್ರಯಾಣವನ್ನು ಆನಂದಿಸಿದ್ದಾರೆ.
ತನ್ನ ತಾಯಿಯೊಂದಿಗೆ ದಿನದ ಪ್ರವಾಸವನ್ನು ಆನಂದಿಸಿದ 11 ವರ್ಷದ ಲಿಲಿ ಪಿರಾಟ್ಚಕಿಟ್, ಅಂತ್ಯವಿಲ್ಲದ ನೀರಿನ ನೋಟವು, ವೀಕ್ಷಿಸಲು ಬಹಳ ಅದ್ಭುತವಾಗಿದೆ ಎಂದು ತಿಳಿಸಿದ್ದಾನೆ.
ಬ್ಯಾಂಕಾಕ್‌ನಿಂದ ಹೊರಬಂದ ಮೂರೂವರೆ ಗಂಟೆಗಳ ನಂತರ, 20 ನಿಮಿಷಗಳ ಕಾಲ ಸೆಲ್ಫಿ ಸಮಯಕ್ಕಾಗಿ ರೈಲು ನಿಲ್ಲಿಸಿತು. ರೈಲ್ವೇ ಟ್ರ್ಯಾಕ್‌ನಲ್ಲಿ ಫೋಟೋಗಳಿಗೆ ಪೋಸ್ ನೀಡುವುದೇ ಒಂದು ಥ್ರಿಲ್ ಅಂತಾ 21 ವರ್ಷದ ತೈವಾನ್‌ನ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೀ ವು ಹೇಳಿದ್ದಾನೆ.
ವರ್ಷದ ಬಹುಪಾಲು, ಜಾನುವಾರುಗಳು ಸೇತುವೆಯ ಕೆಳಗೆ ಮೇಯುತ್ತಿರುತ್ತದೆ. ಆದರೆ, ಅಕ್ಟೋಬರ್‌ನಿಂದ ಜನವರಿವರೆಗೆ, ಎರಡೂ ಬದಿಗಳಲ್ಲಿ ನೀರು ಹೆಚ್ಚಾಗಿರುತ್ತದೆ. ಇದು ರೈಲು ನೀರಿನ ಮೇಲೆ ತೇಲುತ್ತಿದೆ ಎಂಬ ಭಾವನೆಯನ್ನು ನೀಡುತ್ತದೆ ಎಂದು ದೀರ್ಘಕಾಲದ ಬ್ರಿಟಿಷ್ ವಲಸಿಗ, ಪ್ರಯಾಣ ಬ್ಲಾಗರ್ ರಿಚರ್ಡ್ ಬ್ಯಾರೋ ಹೇಳಿದ್ದಾರೆ.