ಮನುಷ್ಯರನ್ನು ರಂಜಿಸುವ ಆನೆಗಳ ದುರ್ಗತಿ: ನೋವಿನ ಫೋಟೋ ವೈರಲ್​

ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವ ಪ್ರಾಣಿಗಳ ಮೇಲೆ ಮಾನವನ ಕ್ರೌರ್ಯವನ್ನು ತೋರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಹಳ ಗಾಯಗೊಂಡ ಆನೆಯ ಫೋಟೋ ಇದಾಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ಥೈಲ್ಯಾಂಡ್‌ನ ವೈಲ್ಡ್‌ಲೈಫ್ ಫ್ರೆಂಡ್ಸ್ ಫೌಂಡೇಶನ್ (ಡಬ್ಲ್ಯುಎಫ್‌ಎಫ್‌ಟಿ) ಇನ್‌ಸ್ಟಾಗ್ರಾಮ್‌ನಲ್ಲಿನ ಈ ಚಿತ್ರವು ಮನುಷ್ಯನ ಕ್ರೂರತನಕ್ಕೆ ಸಾಕ್ಷಿಯಾಗಿದೆ. ಪೈಲಿನ್ ಎಂಬ 71 ವರ್ಷದ ಹೆಣ್ಣು ಆನೆಯನ್ನು ಚಿತ್ರದಲ್ಲಿ ನೋಡಬಹುದು. ಇದು 25 ವರ್ಷಗಳಿಂದ ಥೈಲ್ಯಾಂಡ್‌ನ ಪ್ರವಾಸೋದ್ಯಮ ಉದ್ಯಮದಲ್ಲಿ ಕೆಲಸ ಮಾಡಿತ್ತು.

ಅದರ ಈಗಿನ ಸ್ಥಿತಿಯನ್ನು ಫೋಟೋದಲ್ಲಿ ನೇರವಾಗಿ ನೋಡಬಹುದಾಗಿದೆ. ಈ ಛಾಯಾಚಿತ್ರದಲ್ಲಿ ಪೈಲಿನ್ ಆನೆಯ ಬೆನ್ನುಮೂಳೆಯನ್ನು ನೋಡಬಹುದು. ಅದು ಸ್ವಾಭಾವಿಕವಾಗಿ ದುಂಡಾಗಿರುತ್ತದೆ ಮತ್ತು ಮೇಲಕ್ಕೆತ್ತಿ ಇರುತ್ತದೆ. ಆದರೆ ಪದೇ ಪದೇ ಜನರು ಇದರ ಮೇಲೆ ಸವಾರಿ ಮಾಡುತ್ತಿರುವ ಕಾರಣ, ಭಾರೀ ತೂಕದಿಂದ ಅದು ಹಾನಿಗೆ ಒಳಗಾಗಿರುವುದನ್ನು ಫೋಟೋದಲ್ಲಿ ಸ್ಪಷ್ಟವಾಗಿ ಗಮನಿಸಬಹುದಾಗಿದೆ.

ಇದೇ ರೀತಿ ತೊಂದರೆಗೆ ಒಳಗಾಗಿರುವ ಆನೆಗಳ ಫೋಟೋಗಳನ್ನು ನೆಟ್ಟಿಗರು ಶೇರ್​ ಮಾಡುತ್ತಲಿದ್ದಾರೆ. ನಮ್ಮ ಮನರಂಜನೆಗಾಗಿ ಪ್ರಾಣಿಗಳನ್ನು ಬಳಸಲು ನಮಗೆ ಯಾವುದೇ ಹಕ್ಕುಗಳಿಲ್ಲ. ಆನೆಗಳು ತಮ್ಮ ಕುಟುಂಬಗಳೊಂದಿಗೆ ಸ್ವತಂತ್ರವಾಗಿರುವ ಹಕ್ಕನ್ನು ಮನುಷ್ಯರು ಕೊಡಬೇಕಿದೆ ಎಂದು ಹಲವರು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read