Text Book revision : ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ : ಮಾಜಿ ಸಿಎಂ HDK ಕಿಡಿ

ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದು, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್, ಬಿಜೆಪಿ ಈ 2 ಪಕ್ಷದವರು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಇಂತಹ ವಾತಾವರಣ ನಿರ್ಮಾಣ ಮಾಡಬೇಡಿ ಎಂದು ವಾಗ್ಧಾಳಿ ನಡೆಸಿದರು.

ಸರ್ವರ್ ಸ್ತ್ರಾಂಗ್ ಮಾಡಿಕೊಳ್ಳಬೇಕು ಎಂದು ಗೊತ್ತಿಲ್ವಾ..? ಇವರೆಲ್ಲಾ ನಮ್ಮ ಮಂತ್ರಿಗಳು..? ಬರೀ ಬಾಯಿ ಚಪಲಕ್ಕೆ ಮಾತನಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ. ಡಿಸಿಸಿ ಬ್ಯಾಂಕ್ ಹಗರಣ ಒಂದಿದೆ, ಹಗರಣದ ಬಗ್ಗೆ ತನಿಖೆ ನಡೆದ್ರೆ ಯಾರ್ಯಾರು ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ.ಇನ್ನೊಂದು ಕಡೆ ವಿದ್ಯುತ್ ಬಿಲ್ ಸಮಸ್ಯೆ ಉಂಟಾಗಿದೆ. ಕಾಲೇಜಿಗೆ 35 ಲಕ್ಷ ಕರೆಂಟ್ ಬಿಲ್ ಬಂದಿದೆ ಎಂದು ವಿಟಿಯು ವಿಸಿ ಬಾಯಿಬಡ್ಕೊಂತಿದಾರೆ..ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read