Viral Photo | ಜಮ್ಮು ಕಾಶ್ಮೀರದ ಹತ್ಯೆಗೂ ಮುನ್ನ ಸೇನಾ ಸಮವಸ್ತ್ರದಲ್ಲಿ ಭೋಜನ ಮಾಡಿದ್ದ ಉಗ್ರ

ಉಗ್ರರ ದಾಳಿಯಲ್ಲಿ ಏಳು ಜೀವಗಳನ್ನು ಬಲಿ ತೆಗೆದುಕೊಂಡ ಜಮ್ಮು ಕಾಶ್ಮೀರದ ರಜೌರಿ ಹತ್ಯೆಯ ಘಟನೆಯಲ್ಲಿ ಆಘಾತಕಾರಿ ಬೆಳವಣಿಗೆ ಎಂಬಂತೆ, ಭಯೋತ್ಪಾದಕರು ಮನೆಯೊಂದರಲ್ಲಿ ಕುಳಿತುಕೊಂಡು ಮನೆಯವರೊಂದಿಗೆ ಊಟ ಮಾಡುತ್ತಿದ್ದಾರೆ. ಈ ದೃಶ್ಯದ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.

ಪತ್ರಕರ್ತ ಅರ್ಜುನ್ ಶರ್ಮಾ ಪೋಸ್ಟ್ ಮಾಡಿದ ಫೋಟೋದಲ್ಲಿ, ಇಬ್ಬರು ಪುರುಷರು ಮನೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಶರ್ಮಾ ಅವರು ತಮ್ಮ ಪೋಸ್ಟ್ ನಲ್ಲಿ ದೃಶ್ಯಗಳು ರಜೌರಿ ಸಮೀಪದ ದೂರದ ಪ್ರದೇಶದ ಮನೆಯೊಂದರವು. ಚಿತ್ರದಲ್ಲಿನ ಪುರುಷರು ಏಳು ನಾಗರಿಕರ ಹತ್ಯೆಯ ಹಿಂದಿನ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಎಂದು ಹೇಳಿದ್ದಾರೆ.

ಜನವರಿ 1 ಮತ್ತು 2 ರಂದು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಅಪ್ಪರ್ ಡ್ಯಾಂಗ್ರಿ ಗ್ರಾಮದಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ನಾಗರಿಕರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read