ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದು, ಎನ್ಕೌಂಟರ್ ನಲ್ಲಿ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ದೇಗ್ವಾರ್ ಸೆಕ್ಟರ್ ನಲ್ಲಿ ನಿಯಂತ್ರಣ ರೇಖೆಯ(ಎಲ್ಒಸಿ) ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನದಲ್ಲಿ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.
ರಾತ್ರಿಯಿಡೀ ಸುರಿಯುತ್ತಿದ್ದ ಭಾರೀ ಮಳೆಯ ನಡುವೆ ಒಳನುಸುಳುವಿಕೆ ಪ್ರಯತ್ನ ಮಾಡಲಾಗಿದೆ. ಇಬ್ಬರು ಅಥವಾ ಮೂವರು ಭಯೋತ್ಪಾದಕರು ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ಭಾರತದ ನೆಲಕ್ಕೆ ನುಸುಳಲು ಪ್ರಯತ್ನಿಸಿದ್ದಾರೆ.
ಭದ್ರತಾ ಪಡೆಗಳು ತ್ವರಿತವಾಗಿ ಕ್ರಮಕೈಗೊಂಡಿವೆ. ಒಳನುಸುಳುವವರು ಮತ್ತು ಎಲ್ಒಸಿಯಲ್ಲಿ ಬೀಡುಬಿಟ್ಟಿರುವ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್ಕೌಂಟರ್ ಇನ್ನೂ ನಡೆಯುತ್ತಿದೆ. ಆ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.