ಜೈಪುರ: ಉಗ್ರರಿಗೆ ಹಣಕಾಸು ನೆರವು ನೀಡಿದ ಮೂವರು ಮೌಲ್ವಿಗಳು ಸೇರಿದಂತೆ ಐವರು ಶಂಕಿತ ಉಗ್ರರನ್ನು ಎಟಿಎಸ್ ಅಧಿಕಾರಿಗಳು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಅಯೂಬ್, ಮಸೂದ್, ಉಸ್ಮಾನ್ ಎಂಬ ಮೂವರು ಮೌಲ್ವಿಗಳು ಹಾಗೂ ಕರೌಲ್ ನ ಜುನೈದ್ ಹಾಗೂ ಮತ್ತೋರ್ವ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಅಯೂಬ್ ಜೋಧ್ ಪುರದ ಚೋಖಾದ ಅರೇಬಿಯಾ ಮದರಸಾದ ಧರ್ಮಗುರುವಾಗಿದ್ದು, ಆತನಿಂದ ಅಧಿಕಾರಿಗಳು ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ೧೩ ವರ್ಷಗಳಿಂದ ಮದರಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ಮನೆಯಿಂದ ಎಟಿಎಸ್ ಅಧಿಕಾರಿಗಳು ಮೂರು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪದೆದಿದ್ದಾರೆ.
