BIG NEWS: ಕೆಮಿಕಲ್ ವೆಪನ್ಸ್ ತಯಾರಿಸುತ್ತಿದ್ದ ಐವರು ಐಸಿಸ್ ಉಗ್ರರು ಅರೆಸ್ಟ್

ನವದೆಹಲಿ: ಕೆಮಿಕಲ್ ವೆಪನ್ಸ್ ತಯಾರಿಸುತ್ತಿದ್ದ ಹಾಗೂ ಮುಸ್ಲಿಂ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳಲು ಖಿಲಾಪತ್ ಮಾದರಿ ಅನುಸರಿಸುತ್ತಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಎನ್ ಐಎ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಐಸಿಸ್ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ದೆಹಲಿ, ಮಧ್ಯಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ, ತೆಲಂಗಾಣಗಳಲ್ಲಿ ಐವರನ್ನು ಬಂಧಿಸಲಾಗಿದ್ದು, ಅಪಾರ ಪ್ರಮಾಣದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಮುಂಬೈ ನಿವಾಸಿ ಅಫ್ತಾಬ್, ಅಬು ಸುಫಿಯಾನ್ ಇಬ್ಬರನ್ನು ದೆಹಲಿಯ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ, ಆಶರ್ ದಾನಿಶ್ ನನ್ನು ರಾಂಚಿಯಲ್ಲಿ, ಖಮ್ರಾನ್ ಖುರೇಷಿಯನ್ನು ಮಧ್ಯಪ್ರದೇಶದ ರಾಜ್ ಗಢದಲ್ಲಿ, ಹುಜೈಫ್ ಯಮೇನ್ ನನ್ನು ತೆಲಂಗಾಣದಲ್ಲಿ ಬಂಧಿಸಲಾಗಿದೆ.

ಬಂಧಿತ ಐವರು ಐಸಿಸ್ ಉಗ್ರ ಸಂಘಟನೆಯ ಸ್ಲೀಪರ್ ಮಾಡ್ಯೂಲ್ ನ ಒಂದು ಭಾಗವಾಗಿದ್ದರು. ಬಾಅಂಬ್ ಗಳನ್ನು ತಯಾರಿಸುವುದು, ಶಸ್ತ್ರಾಸ್ತ್ರಗಳ ಸಂಗ್ರಹ, ಮುಸ್ಲಿಂ ಸಂಘಟನೆ ಬಲ ಹೆಚ್ಚಿಸುವುದೇ ಇವರ ಕೆಲಸವಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read