ಥೈಲ್ಯಾಂಡ್‌ನಂತಹ ಸ್ಥಳದಲ್ಲಿ ನೀವು ರಜೆಯಲ್ಲಿದ್ದಾಗ, ನಿಮ್ಮ ಹೋಟೆಲ್ ಕೊಠಡಿಯ ಹೊರಗೆ ಕಾಳಿಂಗ ಸರ್ಪಗಳು ಹರಿದಾಡುತ್ತಿರುವುದನ್ನು ನಿರೀಕ್ಷಿಸುವುದು ಅಸಾಧ್ಯ. ಆದರೆ ಒಬ್ಬ ಪ್ರವಾಸಿಗನಿಗೆ ಇದೇ ಅನುಭವವಾಗಿದೆ.
ಈಗ ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಆ ವ್ಯಕ್ತಿ ತನ್ನ ನೆಲ ಮಹಡಿಯ ಕೋಣೆಯ ಹೊರಗೆ ದೈತ್ಯ ಹಾವು ಕಾಣಿಸಿಕೊಂಡಿದ್ದನ್ನು ವಿವರಿಸುತ್ತಾನೆ. ನಂತರ ಪೊದೆಗಳಲ್ಲಿನ ರಂಧ್ರದಿಂದ ಇನ್ನೆರಡು ಹಾವುಗಳು ಹೊರಬರುತ್ತವೆ. ಇನ್‌ಸ್ಟಾಗ್ರಾಮ್ ಬಳಕೆದಾರರು ಆ ಸರೀಸೃಪಗಳನ್ನು ಕಾಳಿಂಗ ಸರ್ಪಗಳೆಂದು ಗುರುತಿಸಿದ್ದಾರೆ.
“@thailand_thb” ಎಂಬ ಖಾತೆಯಿಂದ “ಥೈಲ್ಯಾಂಡ್‌ನಿಂದ ಹೊರಡುವ ಸಮಯ ಇರಬಹುದು” ಎಂಬ ಬರಹದೊಂದಿಗೆ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, “ಅವುಗಳ ಗಾತ್ರವನ್ನು ನೋಡಿ!” ಎಂಬ ಶೀರ್ಷಿಕೆ ನೀಡಲಾಗಿದೆ. ಇದು ವೈರಲ್ ಆಗಿದ್ದು, 5,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರರು ಈ ದೃಶ್ಯವನ್ನು ಕಂಡು ಆಘಾತರಾಗಿದ್ದಾರೆ. ಒಬ್ಬ ಬಳಕೆದಾರರು ಕಾಮೆಂಟ್ “ಕಾಳಿಂಗ ಸರ್ಪಗಳ ಗೂಡನ್ನು ನೋಡುವುದು ಹುಚ್ಚುತನ!!! ಭಯಾನಕವಾಗಿರಬಹುದು ಆದರೆ ಅದು ತುಂಬಾ ಅದ್ಭುತವಾಗಿದೆ.” ಎಂದರೆ ಇನ್ನೊಬ್ಬ ಬಳಕೆದಾರರು, “ಕಾಳಿಂಗ ಸರ್ಪಗಳು!! ಅವು ಸುಂದರವಾಗಿರುತ್ತವೆ ಆದರೆ ತುಂಬಾ ಆಕ್ರಮಣಕಾರಿ ಮತ್ತು ಮಾರಣಾಂತಿಕವಾಗಿವೆ – ಅವುಗಳನ್ನು ಸಮೀಪಿಸಬೇಡಿ – ನಿಮಗೆ ಉತ್ತಮ ರಜೆ!” ಎಂದು ಹೇಳಿದ್ದಾರೆ.
ಮತ್ತೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು “ನೀವು ತುಂಬಾ ಅದೃಷ್ಟಶಾಲಿ ! ಅವು ಬಹಳ ಅಪರೂಪ. ಅವುಗಳನ್ನು ಹಾಗೆಯೇ ಇರಲು ಬಿಡಿ, ಅವು ಬದುಕಲಿ, ನೀವು ಆರಾಮವಾಗಿರಿ. ನಿಮ್ಮ ಶಬ್ದ ಕೇಳಿದ ತಕ್ಷಣ ಅವು ಓಡಿಹೋಗುತ್ತವೆ.” ನಾಲ್ಕನೇ ವ್ಯಕ್ತಿಯೊಬ್ಬರು ಬರೆದಿದ್ದಾರೆ, “ನನ್ನ ಉಳಿದ ರಜೆಗೆ ಒಂದು ಎತ್ತರದ ಅಪಾರ್ಟ್‌ಮೆಂಟ್‌ನಲ್ಲಿ ರೂಮ್ ಬುಕ್ ಮಾಡಿ ಅಥವಾ ನನ್ನನ್ನು ಮನೆಗೆ ಕರೆದೊಯ್ಯುವ ಮುಂದಿನ ವಿಮಾನದ ಟಿಕೆಟ್ ಕೊಡಿ.” ಎಂದು ತಮಾಷೆ ಮಾಡಿದ್ದಾರೆ.
ಅನಿರೀಕ್ಷಿತ ಸ್ಥಳದಲ್ಲಿ ಹಾವು ಕಾಣಿಸಿಕೊಂಡ ವಿಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಬ್ಯಾಂಕಾಕ್‌ನಿಂದ ಫುಕೆಟ್‌ಗೆ ಹೋಗುವ ವಿಮಾನದಲ್ಲಿ, ಮೇಲಿನ ಕ್ಯಾಬಿನ್‌ನಲ್ಲಿ ಹಾವು ಹರಿದಾಡುತ್ತಿರುವುದು ಕಂಡುಬಂದಿತ್ತು. ವಿಡಿಯೊದಲ್ಲಿ, ವಿಮಾನದ ಸಿಬ್ಬಂದಿಯೊಬ್ಬರು ಪ್ಲಾಸ್ಟಿಕ್ ಬಾಟಲ್ ಮತ್ತು ಚೀಲವನ್ನು ಬಳಸಿ ಆ ಸಣ್ಣ ಹಾವನ್ನು ಕೌಶಲ್ಯದಿಂದ ಹಿಡಿಯುತ್ತಿರುವುದು ವಿಮಾನ ನಿಗದಿತ ಸಮಯಕ್ಕೆ ಇಳಿಯುವ ಮೊದಲು ಕಂಡುಬಂದಿತು.