ಆರೋಗ್ಯಪೂರ್ಣ ಜೇನುತುಪ್ಪದಿಂದಾಗುತ್ತೆ ಹಲವು ಉಪಯೋಗ

ಇತ್ತೀಚಿನ ದಿನಗಳಲ್ಲಿ ಜೇನನ್ನು ಕೇವಲ ಸಿಹಿಯಾಗಿ ಮಾತ್ರ ಉಪಯೋಗಿಸುವುದಲ್ಲದೇ, ಇದರಿಂದ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಪಡೆಯಬಹುದಾಗಿದೆ. ಜೇನುನೊಣಗಳು ವಿವಿಧ ಹೂವುಗಳ ಪರಾಗಸ್ಪರ್ಶದಿಂದ ಮಕರಂದವನ್ನು ಹೀರಿ, ಜೇನುತುಪ್ಪವನ್ನು ಸಂಗ್ರಹಿಸುತ್ತವೆ.

ಜೇನಿನಲ್ಲಿ ಸಾಕಷ್ಟು ಪೋಷಕಾಂಶಗಳು, ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಹೀಲಿಂಗ್ ಕಾಂಪೌಂಡ್ಸ್ ಗಳಿವೆ. ಹಾಗೆಯೇ ಇದು ತ್ವಚೆಗೆ ಉತ್ತಮವಾದ ಮಾಯಶ್ಚರೈಸರಾಗಿ, ಆ್ಯಂಟಿಏಜಿಂಗ್ ಹಾಗೆ ಅ್ಯಂಟಿ-ಬ್ಯಾಕ್ಟೀರಿಯಲ್ ಆಗಿ ಕೆಲಸ ಮಾಡುತ್ತದೆ. ಪ್ರತಿದಿನ ಮುಖದ ತ್ವಚೆಗೆ ಜೇನನ್ನು ಲೇಪಿಸಿ(ಹುಬ್ಬಿನ ಭಾಗವನ್ನು ಬಿಟ್ಟು), ಅರ್ಧ ತಾಸಿನ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ತ್ವಚೆಯ ಹೊಳಪು ಹೆಚ್ಚಿ, ಸುಂದರವಾಗಿ ಹಾಗೆಯೇ ಕಾಂತಿಯುತವಾಗುತ್ತದೆ.

ಜೇನು ನೈಸರ್ಗಿಕವಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಅಂಶವನ್ನು ಒಳಗೊಂಡಿದೆ. ಇದರಿಂದ ಸೂರ್ಯನ ಕಿರಣಗಳಲ್ಲಿರುವ ಅಲ್ಟ್ರಾ ವೈಲೆಟ್ ರಶ್ಮಿಗಳಿಂದ ಆಗುವ ತ್ವಚೆಯ ಮೇಲಿನ ದುಷ್ಪರಿಣಾಮಗಳಿಗೆ ರಕ್ಷಣೆ ನೀಡುತ್ತವೆ. ತ್ವಚೆಯನ್ನು ಸೂರ್ಯನ ಕಿರಣಗಳಿಗೆ ಅತಿಯಾಗಿ ಒಡ್ಡುವುದರಿಂದ, ವಯಸ್ಸಿಗೆ ಮುನ್ನವೇ ಮುಪ್ಪು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಿಸಿಲಿನಿಂದ ಬಂದ ನಂತರ ಸನ್ ಸ್ಕ್ರೀನಾಗಿ ಲೇಪಿಸಿಕೊಂಡು ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇನ್ನುಳಿದಂತೆ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ಆಲಸ್ಯ ಮತ್ತು ನಿಸ್ತೇಜತೆಯನ್ನು ಹೋಗಲಾಡಿಸಿ ಇಡೀ ದಿನ ಉಲ್ಲಾಸದಿಂದ ಇರಬಹುದು. ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಕೌಂಟ್ಸ್ ಹೆಚ್ಚಾಗಿ ರಕ್ತಹೀನತೆಯ ಸಮಸ್ಯೆಯನ್ನು ದೂರಮಾಡಬಹುದು. ಅಲ್ಲದೇ ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕರಗಿಸಲು ಸಹಾಯ ಮಾಡುತ್ತದೆ.

ಇಷ್ಟೆಲ್ಲಾ ಉಪಯುಕ್ತ ಅಂಶಗಳನ್ನು ಹೊಂದಿರುವ ಜೇನನ್ನು ನಿತ್ಯಜೀವನದಲ್ಲಿ ಉಪಯೋಗಿಸಿ, ನಿಮ್ಮ ಆರೋಗ್ಯವನ್ನು ಕೂಡ ಜೇನಿನಂತೆ ಸಿಹಿಯಾಗಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read