Viral Video| ಸಂದರ್ಶನದ ಮಧ್ಯೆ ಅಡ್ಡ ಬಂದ ಯುವಕ; ತಪರಾಕಿ ಕೊಟ್ಟ ನಟಿ

ದುಬೈನಲ್ಲಿ ಇತ್ತೀಚೆಗೆ ‘ಸೈಮಾ ಅವಾರ್ಡ್’ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಇದರಲ್ಲಿ ಖ್ಯಾತನಾಮ ನಟ – ನಟಿಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೆಲೆಬ್ರೆಟಿಗಳ ಸಂದರ್ಶನವೂ ಕೂಡ ಈ ವೇಳೆ ನಡೆದಿತ್ತು.

ಈ ರೀತಿಯ ಸಂದರ್ಶನದಲ್ಲಿ ಟಾಲಿವುಡ್ ನಟಿ ಲಕ್ಷ್ಮಿ ಮಂಚು ಪಾಲ್ಗೊಂಡಿದ್ದು, ಈ ವೇಳೆ ಯುವಕನೊಬ್ಬ ಅಡ್ಡ ಬಂದಿದ್ದಕ್ಕೆ ಗರಂ ಆದ ಅವರು ಅವನ ಬೆನ್ನ ಮೇಲೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ತೆಲುಗಿನಲ್ಲಿ ಆತನಿಗೆ ಗದರಿದ್ದಾರೆ.

ಆದರೆ ದುರಾದೃಷ್ಟಕ್ಕೆ ಮತ್ತೊಬ್ಬ ಈ ಸಂದರ್ಶನಕ್ಕೆ ಇದೇ ವೇಳೆ ಅಡ್ಡ ಬಂದಿದ್ದು, ಆಗ ಮತ್ತಷ್ಟು ಕೆಂಡಾಮಂಡಲರಾದ ಲಕ್ಷ್ಮೀ ಮಂಚು, ‘Drrr’ ಎನ್ನುವುದರ ಜೊತೆಗೆ ಆತನನ್ನು ಅಲ್ಲಿಂದ ಹೋಗುವಂತೆ ಹೇಳಿದ್ದಾರೆ.

ಅವರ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಥರಹೇವಾರಿ ಕಾಮೆಂಟ್ ಗಳಿಗೆ ಕಾರಣವಾಗಿದೆ. ಬಹಳಷ್ಟು ಜನ ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರೆ, ಮತ್ತಷ್ಟು ಮಂದಿ ನಟಿ ಆ ರೀತಿ ವರ್ತಿಸಬಾರದಿತ್ತು ಎಂದಿದ್ದಾರೆ.

https://twitter.com/Paprikaashh/status/1705628259612807673?ref_src=twsrc%5Etfw%7Ctwcamp%5Etweetembed%7Ctwterm%5E1705628259612807673%7Ctwgr%5E315cfb354ccaa83696349e09c8a84f756fbd5b54%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fteluguactresslakshmimanchusdrrroncameragoesviralnetizenscanthaveenoughwatch-newsid-n540955034

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read