BIG NEWS: ಬೆಂಗಳೂರಿನಲ್ಲಿ ಅಲ್ಲು ಅರ್ಜುನ್-ಪ್ರಭಾಸ್ ಫ್ಯಾನ್ಸ್ ಗಳ ನಡುವೆ ಗಲಾಟೆ; ಯುವಕನನ್ನು ಮನಬಂದಂತೆ ಥಳಿಸಿದ ಗುಂಪು

ಬೆಂಗಳೂರು: ಬಾಲಿವುಡ್ ನಲ್ಲಿ ನಡೆಯುವಂತೆ ನಟರ ಅಭಿಮಾನಿಗಳ ನಡಿವಿನ ಕಿರಿಕ್ ಇದೀಗ ಬೆಂಗಳೂರಿನಲ್ಲಿಯೂ ನಡೆದಿದೆ. ಇಬ್ಬರು ತೆಲುಗು ನಟರ ಫ್ಯಾನ್ಸ್ ಗ್ರೂಪ್ ಗಳ ನಡುವೆ ಗಲಾಟೆ ನಡೆದು ಮನಬಂದಂತೆ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಕ್ರಿಕೆಟ್ ಮೈದಾನದಲ್ಲಿ ನಡೆದಿದೆ.

ಮೈದಾನದಲ್ಲಿ ಆಟವಾಡುತ್ತಿದ್ದ ಅಲ್ಲು ಅರ್ಜುನ್ ಹಾಗೂ ಪ್ರಭಾಸ್ ಅಭಿಮಾನಿಗಳ ಗುಂಪಿನ ನಡುವೆ ಮಾತಿನಚಕಮಕಿ ಆರಂಭವಾಗಿದೆ. ಎರಡು ಗುಂಪುಗಳ ಮಧ್ಯೆ ವಾಗ್ವಾದ ತಾರಕಕ್ಕೇರಿದ್ದು, ಕೆಲ ಯುವಕರು ಓರ್ವ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ. ಮುಖಕ್ಕೆ ರಕ್ತ ಬರುವಂತೆ ಹೊಡೆದಿದ್ದಾರೆ.

ಯುವಕರ ಗುಂಪು ಇನ್ನೋರ್ವ ಯುವಕನನ್ನು ನಿಂದಿಸಿ, ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ತೆಲುಗು ನಟರ ಫ್ಯಾನ್ಸ್ ನಡುವೆ ನಡೆದ ಈ ಗಲಾಟೆಯ ದೃಶ್ಯವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ಹಲ್ಲೆಗೊಳಗಾದ ಯುವಕ ಯಾರು? ಗಲಾಟೆ ಹೊಡೆದಾಟದವರೆಗೂ ಹೋಗಲು ಕಾರಣವೇನು? ಎಂಬುದು ತಿಳಿದುಬಂದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read