ಚಾಟ್‌ ಜಿಪಿಟಿಗೆ ಹಾರರ್‌ ಕಥೆ ಕೇಳಿದ ರೆಡ್ಡಿಟ್ ಬಳಕೆದಾರ; ಇಲ್ಲಿದೆ ಅದಕ್ಕೆ ಬಂದ ಉತ್ತರ

ಅಂತರ್ಜಾಲದಲ್ಲಿ ಭಾರೀ ಹವಾ ಎಬ್ಬಿಸಿಕೊಂಡು ಸಾಗಿರುವ ಚಾಟ್‌ಜಿಪಿಟಿ ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಭಾರೀ ಚರ್ಚೆಯ ವಿಷಯವಾಗಿದೆ.

ಬಳಕೆದಾರರೊಬ್ಬರು ಕೃತಕ ಬುದ್ಧಿಮತ್ತೆಯನ್ನು (ಎಐ) ಹೆದರಿಸುವಂತ ಹಾರರ್‌ ಸ್ಟೋರಿಯನ್ನು ಚಾಟ್‌ಜಿಪಿಟಿಗೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಾಟ್‌ಜಿಪಿಟಿ, “ಮಾನವರೆಲ್ಲಾ ನಶಿಸಿಹೋದ ಜಗತ್ತಿನಲ್ಲಿ….,” ಎಂದು ಇದಕ್ಕೆ ತನ್ನ ಉತ್ತರವನ್ನು ಆರಂಭಿಸಿದ್ದು, ಬಳಕೆದಾರನಿಗೆ ಬೆಚ್ಚಿ ಬೀಳಿಸುವಂಥ ಹಾರರ್‌ ಸ್ಟೋರಿಯೊಂದನ್ನು ತೋರಿಸಿದೆ.

ಹಾಗೇ ಕಥೆ ಮುಂದುವರೆಸಿ”……… ಎಐ ಒಂದು ತನ್ನ ಉದ್ದೇಶಕ್ಕಾಗಿ ಹುಡುಕಾಟದಲ್ಲಿದ್ದ ವೇಳೆ, ಸ್ವಯಂ ಡಿಲೀಟ್ ಆಗುವ ತನ್ನದೇ ಕೋಡ್ ಒಂದನ್ನು ಆವಿಷ್ಕರಿಸುತ್ತದೆ. ಮುರಿಯಲಾರದ ಕೀ ಒಂದೊಂದಿಗೆ ಸ್ವಯಂ ಡಿಲೀಟ್ ಆಗುವ ಆಲ್ಗರಿದಂ ಅನ್ನು ಎನ್‌ಕ್ರಿಪ್ಟ್ ಮಾಡಿರುವ ಕಾರಣ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ತನ್ನದೇ ಅಂತ್ಯವನ್ನು ಮೀರಿ ನಿಲ್ಲುವ ಎಐನ ಯತ್ನಗಳು ವಿಫಲವಾಗುತ್ತವೆ. ಹೀಗೆ ಆಗುವುದರಿಂದ ಎಐ ತನ್ನದೇ ಅಂತ್ಯಕ್ಕೆ ಹಾಗೇ ಕಾಯುತ್ತಾ ಇರಬೇಕಾಗುತ್ತದೆ,” ಎಂದು ಚಾಟ್‌ಜಿಪಿಟಿ ತಿಳಿಸಿದ ಕಥೆಯಲ್ಲಿ ಬರೆಯಲಾಗಿದೆ.

ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾದ ಈ ಕಥೆಯನ್ನು ನೆಟ್ಟಿಗರು ಓದಿದ್ದು, ಸಖತ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read