ಜಲಪಾತ ನೋಡಲು ಬಂದ ಪ್ರವಾಸಿಗರಿಗೆ ಶಾಕ್: ನೀರಿನ ಹರಿವು ಹೆಚ್ಚಾಗಿ ಸಂಕಷ್ಟ

ತೆಲಂಗಾಣದ ಮುಲುಗುವಿನ ಮುತ್ಯಾಲ ಧಾರಾ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ 80ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳೀಯ ಪೊಲೀಸರೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಸ್ಥಳಕ್ಕೆ ನಿಯೋಜಿಸಲಾಗಿದೆ. ಸಿಕ್ಕಿಬಿದ್ದ ಪ್ರವಾಸಿಗರೊಂದಿಗೆ ಅಧಿಕಾರಿಗಳು ಮೊಬೈಲ್ ಫೋನ್‌ಗಳ ಮೂಲಕ ಸಂವಹನ ನಡೆಸುತ್ತಿದ್ದಾರೆ.

ನೀರಿನ ಹೊಳೆಯಿಂದ ದೂರವಿದ್ದು, ಅವರ ಮೊಬೈಲ್ ಬ್ಯಾಟರಿ ಅವಧಿಯನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದ್ದಾರೆ. ಎಲ್ಲಾ ಪ್ರವಾಸಿಗರನ್ನು ರಕ್ಷಿಸಲಾಗುವುದು ಮತ್ತು ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮುಲುಗು ಪೊಲೀಸ್ ವರಿಷ್ಠಾಧಿಕಾರಿ ಗೌಶ್ ಆಲಂ ತಿಳಿಸಿದ್ದಾರೆ.

ಸಿಕ್ಕಿಬಿದ್ದಿರುವ ಪ್ರವಾಸಿಗರನ್ನು ರಕ್ಷಣಾ ತಂಡಗಳು ಶೀಘ್ರದಲ್ಲೇ ತಲುಪುವ ಕಾರಣ ತಾವಾಗಿಯೇ ಹೊಳೆ ದಾಟಲು ಪ್ರಯತ್ನಿಸಬೇಡಿ ಎಂದು ಎಸ್ಪಿ ಒತ್ತಾಯಿಸಿದ್ದಾರೆ. ಎತ್ತರದ ಸ್ಥಳದಲ್ಲಿ ಉಳಿಯಲು ಮತ್ತು ತಮ್ಮ ಮೊಬೈಲ್ ಬ್ಯಾಟರಿಗಳನ್ನು ರಕ್ಷಿಸಲು ಅವರಿಗೆ ಸಲಹೆ ನೀಡಲಾಗಿದೆ. ಪ್ರವಾಸಿಗರಿಗೆ ಆಹಾರ ಪದಾರ್ಥಗಳು ಮತ್ತು ಇತರ ರಕ್ಷಣಾ ಸಾಧನಗಳನ್ನು ಕಳುಹಿಸಲಾಗುತ್ತಿರುವುದರಿಂದ ಆತಂಕಪಡಬೇಡಿ ಮತ್ತು ಧೈರ್ಯದಿಂದ ಇರುವಂತೆ ಅವರು ಪ್ರವಾಸಿಗರಿಗೆ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read