ತೆಲಂಗಾಣದ ಕಾಮರೆಡ್ಡಿ ಎಂಬಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗಾಗಿ ಖರೀದಿಸಿದ್ದ ಬೋರ್ಬನ್ ಬಿಸ್ಕತ್ ನಲ್ಲಿ ಕಬ್ಬಿಣದ ತಂತಿ ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಹನುಮಂತರೆಡ್ಡಿ ಅವರು ಗೋಡುಪಲ್ಲಿಯ ಸ್ಥಳೀಯ ಅಂಗಡಿಯಿಂದ ಬಿಸ್ಕೆಟ್ ಖರೀದಿಸಿದಾಗ ಈ ಘಟನೆ ಸಂಭವಿಸಿದೆ, ಅವರ ಮಕ್ಕಳು ಬಿಸ್ಕತ್ ಸವಿಯುತ್ತಿರುವಾಗ ಒಂದರಲ್ಲಿ ತೆಳುವಾದ ತಂತಿಯನ್ನು ಗಮನಿಸಿದ್ದಾರೆ.
ಇದಕ್ಕೆ ಕಳವಳ ವ್ಯಕ್ತಪಡಿಸಿರುವ ಅವರು ಚಿತ್ರೀಕರಣ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ. ಅರ್ಧ ತಿಂದ ಬಿಸ್ಕೆಟ್‌ನಿಂದ ಕಬ್ಬಿಣದ ತಂತಿಯು ಗೋಚರವಾಗುವಂತೆ ಅಂಟಿಕೊಂಡಿರುವುದನ್ನು ಫೂಟೇಜ್ ತೋರಿಸುತ್ತದೆ,
https://twitter.com/pakkatelugunewz/status/1844337357283291425?ref_src=twsrc%5Etfw%7Ctwcamp%5Etweetembed%7Ctwterm%5E1844337357283291425%7Ctwgr%5Ed1eb9706f578be0f40ca6d642de34bc0c1dd560b%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Ftelanganamanfindsironwirestickingoutofbourbonbiscuitboughtforkidsfromlocalshopinkamareddyvideogoesviral-newsid-n634619767