BIG NEWS: ಭೀಕರ ಪ್ರವಾಹದಲ್ಲಿ ಸಿಲುಕಿದ 50 ಜನ; ಜೀವ ಉಳಿಸಿಕೊಳ್ಳಲು ಮರ, ದೇವಸ್ಥಾನವನ್ನು ಏರಿ ಕುಳಿತ ಗ್ರಾಮಸ್ಥರು

ಹೈದರಾಬಾದ್: ಭಾರಿ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿದ್ದು, ಡ್ಯಾಂ ನ ಗೇಟ್ ಗಳನ್ನು ತೆರೆದ ಪರುಣಾಮ ಏಕಾಏಕಿ ಪ್ರವಾಹ ಉಂಟಾಗಿ ಗ್ರಾಮಸ್ಥರು ಭೀಕರ ಪ್ರವಾಹದಲ್ಲಿ ಸಿಲುಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ನಾರಾಯಣಪುರ ಹಾಗೂ ಅಶ್ವರಾವ್ ಪೇಟೆಯಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಮೀನು, ಗ್ರಾಮಗಳಿಗೆ ನೀರು ನುಗ್ಗಿದೆ. 50 ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಜೀವ ಉಳಿಸಿಕೊಳ್ಳಲು ಮರ, ದೇವಸ್ಥಾನ, ಮನೆ ಏರಿ ಕುಳಿತಿದ್ದಾರೆ.

ಗ್ರಾಮಗಳೇ ಸಂಪೂರ್ಣ ಜಲಾವೃತಗೊಂಡಿದ್ದು, ದಿಕ್ಕೆಟ್ಟು ಹೋಗಿರುವ ರೈತರು, ಮಹಿಳೆಯರು, ಮಕ್ಕಳು ಪ್ರಾಣ ಉಳಿಸಿಕೊಳ್ಳಲು ಪರದಾಟ ನಡೆಸಿದ್ದಾರೆ.

ಅಶ್ವರಾವ್ ಪೇಟೆ ವ್ಯಾಪ್ತಿಯ ಪೆದ್ದವಾಗು ಡ್ಯಾಂ ನ ಗೇಟ್ ಓಪನ್ ಮಾಡಲಾಗಿದ್ದು, ಇದರಿಂದಾಗಿ ಇದ್ದಕ್ಕಿದ್ದಂತೆ ಪ್ರವಾಹ ಸೃಷ್ಟಿಯಾಗಿದೆ. ಜಿಲ್ಲಾದಳಿತ ಪ್ರವಾಹದಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುತ್ತಿದ್ದು, ಈವರೆಗೆ 20 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read