ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಇನ್ನೂ ಎಳಸು. ಆತನಿಗೆ ಅನುಭವ ಕಡಿಮೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸುರಂರ ರಸ್ತೆ ನಿರ್ಮಾಣ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇರ‍್ಟಿಯಾಗಿ ಸಮಾಲೋಚನೆ ನಡೆಸಿದ್ದರು. ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ತೇಜಸ್ವಿ ಸೂರ್ಯ ಒಬ್ಬ ವೇಸ್ಟ್ ಮೆಟೀರಿಯಲ್. ಗೌರವ ಕೊಟ್ಟು ಕರೆದು ಮಾತನಾಡಿದರೆ ಬಾಯಿಗೆ ಬಂದಂತೆ ಒದರುತ್ತಿದ್ದಾನೆ ಎಂದು ಕಿಡಿಕಾರ್ದರು.
ಟನಲ್ ರಸ್ತೆ ಬೇಡ ಎನ್ನಲು ತೇಜಸ್ವಿ ಸೂರ್ಯ ಯಾರು? ಇಡೀ ದೇಶ, ಪ್ರಪಂಚದಲ್ಲಿಯೇ ಟನಲ್ ರಸ್ತೆಗಳು ಬೇಡ ಎಂದು ಆತ ಕೇಂದ್ರ ಸಚಿವನಾದ ಮೇಲೆ ಲೋಕಸಭೆಯಲ್ಲಿ ತೀರ್ಮಾನಿಸಲಿ. ಸಂಸದ ತೇಜಸ್ವಿ ಸೂರ್ಯಗೆ ಪ್ರಪಂಚ ಹೇಗಿದೆ ಎಂಬುದೇ ಇನ್ನೂ ಗೊತ್ತಿಲ್ಲ ಎಂದರು.
ಹುಡುಗರ ಬಳಿ ಕಾರಿಲ್ಲದಿದ್ದರೆ ಹೆಣ್ಣು ಕೊಡುವುದಿಲ್ಲ ಎಂದು ನಾನು ಹೇಳಿದ್ದೆ. ಅದನ್ನೇ ಹಿಡಿದುಕೊಂಡಿದ್ದಾನೆ. ಆತನ್ಯಾಕೆ ಕಾರಿನಲ್ಲಿ ಓಡಾತ್ತಾನೆ? ಆತ, ಆತನ ಕುಟುಂಬ ಸದಸ್ಯರು ಮೆಟ್ರೀ, ಸರ್ಕಾರಿ ಬಸ್ ಗಳಲ್ಲಿ ಓಡಾಡಲಿ, ಬೇಡ ಎಂದವರು ಯಾರು? ಇವರಿಗೇಕೆ ಕಾರುಗಳು ಬೇಕು? ಬೆಂಗಳೂರಿನಲ್ಲಿ 1.30ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದನ್ನು ತೇಜಸ್ವಿ ಮೊದಲು ಅರ್ಥಮಾಡಿಕೊಳ್ಳಬೇಕು. ಅವರಿಗೆಲ್ಲ ವಾಹನ ಬಳಸಬೇಡಿ ಎನ್ನಲು ಆಗುತ್ತಾ? ಆತ ಮೊದಲು ಕಾರಿನಲ್ಲಿ ಓಡಾಡುವುದನ್ನು ನಿಲ್ಲಿಸಲಿ ಎಂದು ಗುಡುಗಿದರು.
