ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಯುವತಿ; ಟೆಕ್ಕಿಯಿಂದ ಬರೋಬ್ಬರಿ 1.14 ಕೋಟಿ ದೋಚಿ ಪರಾರಿ

ಬೆಂಗಳೂರು: ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯೊಬ್ಬರಿಗೆ ಬರೋಬ್ಬರಿ 1.14 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

41 ವರ್ಷದ ಟೆಕ್ಕಿ ವೈಟ್ ಫೀಲ್ಡ್ ನ ಸಿಇಎನ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಯುವತಿಯ ಖಾತೆಯಿಂದ 84 ಲಕ್ಷ ರೂಪಾಯಿಯನ್ನು ತಡೆಹಿಡಿದಿದ್ದಾರೆ.

ಯುಕೆ ಮೂಲದ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಟೆಕ್ಕಿ, ಸಾಫ್ಟ್ ವೇರ್ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮದುವೆಯಾಗುವ ಉದ್ದೇಶದಿಂದ ಮ್ಯಾಟ್ರಿಮೊನಿಯಲ್ಲಿ ನೋಂದಣಿ ಮಾಡಿದ್ದರು. ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಸಾನ್ವಿ ಅರೋರಾ, ಟೆಕ್ಕಿಗೆ ವಿಡಿಯೋ ಕಾಲ್ ಮಾಡಿದ್ದಾಳೆ. ಬೆತ್ತಲೆ ವಿಡಿಯೋದೊಂದಿಗೆ ಟೆಕ್ಕಿಗೆ ಗೊತ್ತಾಗದಂತೆಯೇ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ನಂತರ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಳಂತೆ.

ವಿಡಿಯೋ, ಫೋಟೊಗಳನ್ನು ಪೋಷಕರಿಗೆ ಕಳುಹಿಸುವುದಾಗಿ ಹೇಳಿ ಬೆದರಿಸಿ ತನ್ನ ಖಾತೆಗೆ ಹಂತ ಹಂತವಾಗಿ ಬರೋಬ್ಬರಿ 1 ಕೋಟಿ 14 ಲಕ್ಷ 18 ಸಾವಿರದ 121 ರೂಪಾಯಿ ವರ್ಗಾಯಿಸಿಕೊಂಡಿದ್ದಾಳಂತೆ. ಯುವತಿಯ ಬ್ಲ್ಯಾಕ್ ಮೇಲ್ ಗೆ ಬೇಸತ್ತ ಟೆಕ್ಕಿ ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯ ಖಾತೆಯಿಂದ 84 ಲಕ್ಷ ರೂಪಾಯಿ ತಡೆಹಿಡಿದಿದ್ದಾರೆ. ಆನ್ ಲೈನ್ ನಲ್ಲಿ ಪರಿಚಯವಾದವರೊಂದಿಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read