ಮಳೆಗಾಲದಲ್ಲಿ ಹಾವು, ಚೇಳುಗಳಂತಹ ವಿಷಕಾರಿ ಜೀವಿಗಳು ಮನೆಗೆ ಬರುತ್ತವೆ. ಆದ್ದರಿಂದ, ಈ ಋತುವಿನಲ್ಲಿ ಹಾವುಗಳ ಬಗ್ಗೆ ಎಚ್ಚರದಿಂದಿರಬೇಕು . ವಿಶೇಷವಾಗಿ ಮಳೆಯಿಂದಾಗಿ, ಹಾವುಗಳು ಒಳಗೆ ಪ್ರವೇಶಿಸಿ ಶೂಗಳಲ್ಲಿ ಅಡಗಿಕೊಂಡಿರುವುದು ಆಗಾಗ್ಗೆ ವರದಿಯಾಗುತ್ತಿದೆ. ಶೂಗಳಲ್ಲಿ ಹಾವು ಅಡಗಿದೆ ಎಂದು ತಿಳಿಯದೆ ಶೂಗಳನ್ನು ಹಾಕಲು ಪ್ರಯತ್ನಿಸಿದರೆ, ಹಾವು ಕಚ್ಚುತ್ತದೆ. ಅದಕ್ಕಾಗಿಯೇ ಮಳೆಗಾಲದಲ್ಲಿ ಶೂ, ಚಪ್ಪಲಿಗಳನ್ನು ನೋಡಿದ ನಂತರವೇ ಶೂಗಳನ್ನು ಧರಿಸಬೇಕು ಎಂದು ಹೇಳಲಾಗುತ್ತದೆ.
ಬೆಂಗಳೂರಿನಲ್ಲಿ ಅಂತಹ ಒಂದು ಪ್ರಕರಣ ಚರ್ಚೆಯ ವಿಷಯವಾಗಿದೆ. ಶನಿವಾರ, ಬೆಂಗಳೂರಿನಲ್ಲಿ 41 ವರ್ಷದ ವ್ಯಕ್ತಿಯೊಬ್ಬರು ಕ್ರಾಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.
ಮೃತರನ್ನು ಬನ್ನೇರುಘಟ್ಟದ ರಂಗನಾಥ ಲೇಔಟ್ ನಿವಾಸಿ ಮಂಜು ಪ್ರಕಾಶ್ ಎಂದು ಗುರುತಿಸಲಾಗಿದೆ. ಅವರು ಟಿಸಿಎಸ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವರದಿಗಳ ಪ್ರಕಾರ, ಅವರು ಹಿಂದೆ ಅಪಘಾತವೊಂದರಲ್ಲಿ ಗಾಯಗೊಂಡು ಕಾಲುಗಳ ಸಂವೇದನೆ ಕಳೆದಕೊಂಡಿದ್ದರು ಅಂದರೆ ಅವರ ಕಾಲು ಮರಗಟ್ಟಿತ್ತು. ಈ ಮರಗಟ್ಟುವಿಕೆಯಿಂದಾಗಿ, ಹಾವು ಕಚ್ಚಿದಾಗ ಅವರಿಗೆ ನೋವು ಗೊತ್ತಾಗಲಿಲ್ಲ. ಇದರಿಂದಾಗಿ ಅವರು ಯಾವುದೇ ಚಿಕಿತ್ಸೆ ಪಡೆಯದೇ ಮೃತಪಟ್ಟಿದ್ದಾರೆ.ವರದಿಗಳ ಪ್ರಕಾರ, ಮಂಜು ಪ್ರಕಾಶ್ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ.
ಶನಿವಾರ ಕಬ್ಬಿನ ಹಾಲು ಕುಡಿಯಲು ಮಂಜು ಮಧ್ಯಾಹ್ನ 12.45 ರ ಸುಮಾರಿಗೆ ಕ್ರೋಕ್ಸ್ ಚಪ್ಪಲಿ ಧರಿಸಿ ಹೋಗಿದ್ದಾರೆ. ಆದರೆ ಅವರ ಚಪ್ಪಲಿಯಲ್ಲಿ ವಿಷಕಾರಿ ಕೊಳಕು ಮಂಡಲ ಹಾವು ಇರುವುದು ಗೊತ್ತಾಗಿಲ್ಲ. ನಂತರ ಬಂದು ಚಪ್ಪಲಿ ತೆಗೆದು ಕೋಣೆ ಒಳಗೆ ವಿಶ್ರಾಂತಿ ಪಡೆಯಲು ಹೋದರು. ಅದೇ ಸಮಯದಲ್ಲಿ, ಅವರ ಕ್ರೋಕ್ಸ್ ಚಪ್ಪಲಿ ಬಳಿ ಸತ್ತ ಹಾವು ಇರುವುದನ್ನು ಕುಟುಂಬ ಸದಸ್ಯರು ತಿಳಿದುಕೊಂಡರು. ಮಂಜು ಪ್ರಕಾಶ್ ಅವರನ್ನು ಹಾವು ಕಚ್ಚಿರುವುದು ಕಂಡುಬಂದಿದೆ. ಅವರು ತಕ್ಷಣ ಮಂಜು ಅವರ ಕೋಣೆಗೆ ಓಡಿಹೋದರು. ಅಲ್ಲಿ, ಅವರು ಹಾಸಿಗೆಯ ಮೇಲೆ ಮಲಗಿದ್ದರು. ಬಾಯಿಯಿಂದ ನೊರೆ ಬರುತ್ತಿರುವುದನ್ನು ಮತ್ತು ಕಾಲಿನಿಂದ ರಕ್ತ ಬರುತ್ತಿರುವುದನ್ನು ನೋಡಿದರು. ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರು ಹಿಂದೆ ಅಪಘಾತವೊಂದರಲ್ಲಿ ಗಾಯಗೊಂಡು ಕಾಲುಗಳ ಸಂವೇದನೆ ಕಳೆದಕೊಂಡಿದ್ದರು ಅಂದರೆ ಅವರ ಕಾಲು ಮರಗಟ್ಟಿತ್ತು. ಈ ಮರಗಟ್ಟುವಿಕೆಯಿಂದಾಗಿ, ಹಾವು ಕಚ್ಚಿದಾಗ ಅವರಿಗೆ ನೋವು ಗೊತ್ತಾಗಲಿಲ್ಲ. ಇದರಿಂದಾಗಿ ಅವರು ಯಾವುದೇ ಚಿಕಿತ್ಸೆ ಪಡೆಯದೇ ಮೃತಪಟ್ಟಿದ್ದಾರೆ