ಬೆಂಗಳೂರು : ಹಿಟ್ & ರನ್ ಗೆ ಟೆಕ್ಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಆಂಧ್ರಪ್ರದೇಶದ ಕರ್ನೂಲ್ ಮೂಲದ ಸಲಗುಣ ಪ್ರದೀಪ್ (25) ಎಂದು ಗುರುತಿಸಲಾಗಿದೆ. . ರಿಂಗ್ ರಸ್ತೆಯ ಕಲ್ಯಾಣ ನಗರದ ಶೋ ರೂಮ್ ವೊಂದರ ಬಳಿ ಈ ಘಟನೆ ನಡೆದಿದೆ.
ಸಾಫ್ಟ್ವೇರ್ಇಂಜಿನಿಯರ್ ಆಗಿದ್ದ ಸಲಗುಣ ಪ್ರದೀಪ್, ನಗರದ ಕಲ್ಕೆರೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶನಿವಾರ ಸಂಜೆ ಬೈಕ್ ನಲ್ಲಿ ಕಲ್ಯಾಣನಗರದಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಸಲಗುಣ ಪ್ರದೀಪ್ ಗಾಯಗೊಂಡಿದ್ದರು, ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳದ ಸಿಟಿಟಿವಿ ದೃಶ್ಯಾವಳಿ ಪರಿಶೀಲಿಸಿ ವಾಹನ ಸವಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
TAGGED:ಹಿಟ್ & ರನ್