ಬೆಂಗಳೂರು: ಪ್ರೀತಿಸುವಂತೆ ಯುವತಿಯ ಹಿಂದೆಬಿದ್ದು, ಕಿರುಕುಳ ನೀಡುತ್ತಿದ್ದ ಟೆಕ್ಕಿಯೋರ್ವನನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀಕಾಂತ್ (45) ಬಂಧಿತ ಆರೋಪಿ. ಶ್ರೀಕಾಂತ್ ಗೆ ಈಗಾಗಲೇ ಮದುವೆಯಾಗಿದೆ. ಆತನ ಮನೆಯಲ್ಲಿ ಬಾಡಿಗೆಗೆ ಇದ್ದ 20 ವರ್ಷದ ಯುವತಿಗೆ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಯುವತಿ ಆತನ ಪತ್ನಿಗೆ ದೂರು ನೀಡಿದ್ದಳು. ಆದರೂ ಯಾವುದೇ ಪ್ರಯೋಜನವಗಿಲ್ಲ. ಯುವತಿ ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಟೆಕ್ಕಿ ಕೋಪಗೊಂಡಿದ್ದ.
ಮೂರು ದಿನಗಳ ಹಿಂದೆ ಯುವತಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬೇರೊಬ್ಬ ಯುವಕನ ಜೊತೆ ನಿಂತಿರುವುದನ್ನು ಗಮನಿಸಿದ್ದ ಟೆಕ್ಕಿ ಶ್ರೀಕಾಂತ್, ಇನ್ನೋರ್ವನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ತನ್ನ ಪ್ರೀತಿ ನಿರಾಕರಿಸಿದ್ದೀಯಾ? ಎಂದು ಪ್ರಶ್ಮಿಸಿ ಚಾಅಕು ಇರಿದಿದ್ದಾನೆ. ನೊಂದ ಯುವತಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಯುವತಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಬನಶಂಕರಿ ಠಾಣೆ ಪೊಲೀಸರು ಟೆಕ್ಕಿಯನ್ನು ಬಂಧಿಸಿದ್ದಾರೆ.