ಧರ್ಮ ಕೀರ್ತಿರಾಜ್ ಅಭಿನಯದ ಸತ್ಯಜಿತ್ ಶಬೀರ್ ನಿರ್ದೇಶನದ ಬಹು ನಿರೀಕ್ಷಿತ ‘ಬುಲೆಟ್’ ಚಿತ್ರದ ಟೀಸರ್ ಅನ್ನು ನಿನ್ನೇ youtube ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ಕೆಲವೇ ಗಂಟೆಗಳಲ್ಲಿ ಭರ್ಜರಿ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.
ಝಾಕ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಧರ್ಮಕೀರ್ತಿರಾಜ್ ಹಾಗೂ ಶ್ರೇಯಾ ಶುಕ್ಲಾ ಸೇರಿದಂತೆ ಶೋಬ್ರಾಜ್, ಭವ್ಯ, ಅಜಿತಾ ಝಾ, ರಾಜ್‌ದೀಪ್ ಬಾಜ್‌ಪೈ, ಇಶಾಕ್ ಖಾಜಿ, ಸತ್ಯಜೀತ್, ಬಣ್ಣ ಹಚ್ಚಿದ್ದಾರೆ. ಗುರು ಪ್ರಸಾದ್ ಸಂಕಲನ ಹಾಗೂ Pvr. ಸ್ವಾಮಿ ಅವರ ಛಾಯಾಗ್ರಹಣವಿದೆ ಇನ್ನುಳಿದಂತೆ ರಾಜ್ ಭಾಸ್ಕರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.