ಹಿರಿಯ ನಟ ಕಾಶಿನಾಥ್ ಅವರ ಪುತ್ರ ಅಭಿಮನ್ಯು ನಾಯಕನಾಗಿ ಅಭಿನಯಿಸಿರುವ ‘ಎಲ್ಲಿಗೆ ಪಯಣ ಯಾವುದೋ’ ದಾರಿ ಚಿತ್ರದ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಈ ಚಿತ್ರವನ್ನು ಸುದರ್ಶನ ಆರ್ಟ್ಸ್ ಹಾಗೂ ವೆಂಚರ್ಸ್ ಬ್ಯಾನರ್ ನಲ್ಲಿ ಜತಿನ್ ಪಾಟೀಲ್ ಹಾಗೂ III ವೆಂಚರ್ಸ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಅಭಿಮನ್ಯು ಕಾಶಿನಾಥ್, ಸ್ಪೂರ್ತಿ ಉಡಿಮನೆ, ಹಾಗೂ ವಿಜಯಶ್ರೀ ಕಲಬುರ್ಗಿ ಸೇರಿದಂತೆ ರಾಜಾ ಬಲವಾಡಿ, ಶೋಭನ್, ಪ್ರದೀಪ್ ರಮೇಶ್ ನಾಯಕ್, ರಿಣಿ, ಬಣ್ಣ ಹಚ್ಚಿದ್ದಾರೆ. ಅನಂತ್ ಕಾಮತ್ ಎಮ್ ಸಂಗೀತ ಸಂಯೋಜನೆ ನೀಡಿದ್ದು, ಗಣೇಶ್ ನೀರ್ಚಾಲ್ ಸಂಕಲನ, ಕಿರಣ್ ಸೂರ್ಯ ಸಂಭಾಷಣೆ, ಹಾಗೂ ಸತ್ಯ ರಾಮ್ ಛಾಯಾಗ್ರಹಣವಿದೆ. ಜೀವನ್ ನೃತ್ಯ ನಿರ್ದೇಶನ ಮತ್ತು ಚಂದ್ರು ಅವರ ಸಾಹಸ ನಿರ್ದೇಶನವಿದೆ.
https://twitter.com/aanandaaudio/status/1832410074326954188