ಈ ಕಾರಣಕ್ಕೆ ಟೀಕೆಗೆ ಗುರಿಯಾಗಿದೆ ʼಟೀಂ ಇಂಡಿಯಾʼ ಆಟಗಾರರ ಹೊಸ ಜೆರ್ಸಿ….!

ಟೀಂ ಇಂಡಿಯಾ 2 ಪಂದ್ಯಗಳ ಟೆಸ್ಟ್​​ ಸರಣಿಯನ್ನು ವೆಸ್ಟ್​ ಇಂಡೀಸ್​ ವಿರುದ್ಧ ಎದುರಿಸುತ್ತಿದೆ. ಅಡಿಡಾಸ್​ ವಿನ್ಯಾಸಗೊಳಿಸಿರುವ ಟೀಂ ಇಂಡಿಯಾ ಹೊಚ್ಚ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ್ದು ಡ್ರೀಮ್​ 11 ಪ್ರಾಯೋಜಕತ್ವದ ಈ ಜೆರ್ಸಿಯೊಂದಿಗೆ ಟೀಂ ಇಂಡಿಯಾ ಪಂದ್ಯವನ್ನು ಎದುರಿಸುತ್ತಿದೆ.

ಟೀಂ ಇಂಡಿಯಾದ ಹೊಸ ಜೆರ್ಸಿಯ ಫಸ್ಟ್​ ಲುಕ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಆದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಜೆರ್ಸಿಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಯನ್ನು ಎದುರಿಸಿದೆ. ಇನ್ನು ಕೆಲವರು ಜೆರ್ಸಿ ವಿನ್ಯಾಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ತಯಾರಿಸಿದ ಜೆರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರು ಫೋಟೋಶೂಟ್​ ಮಾಡಿಸಿದ್ದು ಇದರ ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗಿದೆ. ಜೆರ್ಸಿಯಲ್ಲಿ ದೊಡ್ಡದಾಗಿ ಡ್ರೀಮ್​ 11 ಎಂದು ಪ್ರಿಂಟ್​ ಮಾಡಲಾಗಿದ್ದು ಇದು ಜೆರ್ಸಿಯ ಅಂದವನ್ನು ಸಂಪೂರ್ಣ ಹಾಳು ಮಾಡಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಬಿಳಿ ಬಣ್ಣದ ಜೆರ್ಸಿ ಮೇಲೆ ಗಾಢ ಕೆಂಪು ಬಣ್ಣದಲ್ಲಿ ದಪ್ಪನೆಯ ಅಕ್ಷರಗಳಲ್ಲಿ ಡ್ರೀಮ್​ 11 ಎಂದು ಬರೆಯಲಾಗಿದ್ದು, ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

 

https://twitter.com/i/status/1678673285918146560

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read