BIG NEWS: ಕೈ ತಪ್ಪಿದ ಸರ್ಕಾರಿ ಶಾಲೆ ಶಿಕ್ಷಕ ಹುದ್ದೆ; ಮನನೊಂದ ಯುವಕ ಆತ್ಮಹತ್ಯೆ

ರಾಯಚೂರು: ವ್ಯವಸ್ಥೆಯ ವಿರುದ್ಧ ಬೇಸತ್ತು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

ಚನ್ನಬಸವ (25) ಮೃತ ಯುವಕ. ಚಿಕ್ಕಬುದೂರು ಗ್ರಾಮದ ಖಾಸಗಿ ಶಾಲೆಯ ಕಾಂಪೌಂಡ್ ಪಕ್ಕದಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

2022ರಲ್ಲಿ ಯುವಕ ಚನ್ನಬಸಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿದ್ದ. ಅಂತಿಮ ಲಿಸ್ಟ್ ನಲ್ಲಿಯೂ ಆಯ್ಕೆಯಾಗಿದ್ದ ಆದರೆ ಕೊನೆ ಹಂತದಲ್ಲಿ ಶಿಕ್ಷಕನ ಹುದ್ದೆ ಕೈತಪ್ಪಿದೆ. ಇದರಿಂದ ತೀವ್ರವಾಗಿ ನೊಂದಿದ್ದ ಯುವಕ ಈಗ ಏಕಾಏಕಿ ನೇಣಿಗೆ ಕೊರಳೊಡ್ಡಿದ್ದಾನೆ.

ತನ್ನ ಸಾವಿಗೆ ತಾನೇ ಕಾರಣ. ಪೋಷಕರು ಅಮಾಯಕರು ಎಂದು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read