ʼಪಾಸ್ʼ​ ಆಗಿದ್ದಾಳೆ ಅನ್ನೋ ಬದಲು ‘ಪಾಸ್ಡ್​ ಅವೇ’ ಎನ್ನೋದಾ ಈ ಶಿಕ್ಷಕಿ ? ಫೋಟೋ ವೈರಲ್

ಶಾಲಾ ಮಾರ್ಕ್ಸ್​ ಕಾರ್ಡ್​ನಲ್ಲಿ ಶಿಕ್ಷಕಿಯೊಬ್ಬರು ಬರೆದಿರುವ ಬರವಣಿಗೆ ಸಕತ್​ ವೈರಲ್​ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಾಗಿದೆ.‌

2019 ರ ಅವಧಿಯ ಮೂರನೇ ಪತ್ರಿಕೆಯ ಫಲಿತಾಂಶದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿ ಪಾಸ್​ ಆಗಿದ್ದಾಳೆ ಎಂದು ಬರೆಯುವ ಬದಲು ಇಂಗ್ಲಿಷ್​ನಲ್ಲಿ ಬರೆದಿದ್ದು ಅದು ಅಪಾರ್ಥ ಕಲ್ಪಿಸುವಂತಿದೆ. ಅದರ ಸ್ಕ್ರೀನ್‌ಶಾಟ್ ಸಕತ್​ ವೈರಲ್ ಆಗುತ್ತಿದೆ.

ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಪಾಸ್​ ಆಗಿದ್ದಾಳೆ ಎಂದು ಹೇಳುವ ಬದಲು ಇಂಗ್ಲಿಷ್​​ನಲ್ಲಿ ಪಾಸ್ಡ್​ ಅವೆ (she has passed away) ಎಂದು ಬರೆದಿದ್ದಾರೆ. ಇದರ ಅರ್ಥ ನಿಧನ ಹೊಂದಿದ್ದಾಳೆ ಎಂದಾಗುತ್ತದೆ. ಇದನ್ನು @ಅನಂತ್ ಭಾನ್ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಶಿಕ್ಷಕಿಯಾದವರಿಗೆ ಇಷ್ಟೂ ಇಂಗ್ಲಿಷ್​ ಬರುವುದಿಲ್ಲವೆಂದರೆ ಮಕ್ಕಳಿಗೆ ಏನು ಕಲಿಸುತ್ತಾರೆ ಎಂದು ಹಲವರು ಕಮೆಂಟ್​ ಮಾಡಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read