ರಾಯಚೂರು: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮದ್ಯ ಸೇವಿಸಿ ಶಾಲೆಯ ಅಡುಗೆ ಕೋಣೆ ಮುಂದೆ ಮಲಗಿದ್ದ ಘಟನೆ ನಡೆದಿದೆ.
ಗುರುವಾರ ಮುಖ್ಯ ಶಿಕ್ಷಕ ಮದ್ಯಪಾನ ಮಾಡಿ ಮಲಗಿದ ಘಟನೆ ನಡೆದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ನಿಂಗಪ್ಪ ಅಮಾನತುಗೊಂಡ ಮುಖ್ಯ ಶಿಕ್ಷಕ. ಮದ್ಯಪಾನ ಮಾಡಿ ಶಾಲೆಗೆ ಬಂದಿದ್ದ ನಿಂಗಪ್ಪ ಅಡುಗೆ ಕೋಣೆ ಮುಂಭಾಗ ಮಲಗಿದ್ದಾರೆ. ಬಿಸಿಯೂಟ ಸಿಬ್ಬಂದಿಗೆ ಅಡುಗೆ ಕೋಣೆ ಬಾಗಿಲು ತೆರೆಯಲು ಅವಕಾಶ ನೀಡದೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಮಾಹಿತಿ ತಿಳಿದ ಪೋಷಕರು, ಗ್ರಾಮಸ್ಥರು ಶಾಲೆಗೆ ಬಂದು ಶಿಕ್ಷಕನನ್ನು ಎಬ್ಬಿಸಿ ಕಳುಹಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮುಖ್ಯ ಶಿಕ್ಷಕ ನಿಂಗಪ್ಪನನ್ನು ಅಮಾನತು ಮಾಡಲಾಗಿದೆ.