ವರ್ಗಾವಣೆ ಕೋರಿದ ಶಿಕ್ಷಕರ ಸಂಖ್ಯೆ ಭಾರಿ ಇಳಿಕೆ

ಬೆಂಗಳೂರು: ಶಿಕ್ಷಕರ ವರ್ಗಾವಣೆ ಅರ್ಜಿ ಸಂಖ್ಯೆ ಭಾರಿ ಇಳಿಕೆಯಾಗಿದೆ. ವರ್ಗಾವಣೆ ಕೋರಿ ಶಿಕ್ಷಕರು ಸಲ್ಲಿಸುತ್ತಿದ್ದ ಅರ್ಜಿ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ 10 ಸಾವಿರದಷ್ಟು ಕಡಿಮೆಯಾಗಿದೆ. ಈ ವರ್ಷ 63,571 ಅರ್ಜಿ ಸಲ್ಲಿಕೆಯಾಗಿವೆ.

ಸಲ್ಲಿಕೆಯಾದ 63,571 ಅರ್ಜಿಗಳಲ್ಲಿ 47,587 ಅರ್ಜಿಗಳು ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಸಂಬಂಧಿಸಿದ ಅರ್ಜಿಗಳಾಗಿವೆ. 15,974 ಅರ್ಜಿಗಳು ಪ್ರೌಢಶಾಲೆ ಶಿಕ್ಷಕರಿಂದ ಸಲ್ಲಿಕೆಯಾಗಿವೆ. ಕೋರಿಕೆ ವರ್ಗಾವಣೆಗೆ ಹೆಚ್ಚಿನ ಬೇಡಿಕೆ ಇದೆ.

ವರ್ಗಾವಣೆಗಾಗಿ ಶಿಕ್ಷಕರಿಂದ ಸಲ್ಲಿಕೆಯಾಗಿರುವ 63 ಸಾವಿರ ಅರ್ಜಿಗಳಲ್ಲಿ 59,582 ಅರ್ಜಿಗಳು ಕೋರಿಕೆ ವರ್ಗಾವಣೆಗೆ ಸಂಬಂಧಿಸಿವೆ.2303 ಅರ್ಜಿಗಳು ಪರಸ್ಪರ ವರ್ಗಾವಣೆ ಕೋರಿದ ಅರ್ಜಿಗಳಾಗಿವೆ. 1686 ಅರ್ಜಿಗಳು ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಸೇರಿವೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read