ಕೋಲ್ಕತ್ತಾ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಧರ್ಮ ಕೇಳಿ ದಾಲಿ ನಡೆಸಿದ್ದು, 28 ಜನ ಪ್ರವಾಸಿಗರು ಬಲಿ ಪಡೆದಿರುವ ಘಟನೆಯಿಂದ ತೀವ್ರವಾಗಿ ನೊಂದಿರುವ ಶಿಕ್ಷಕರೊಬ್ಬರು ಇಸ್ಲಾಂ ತ್ಯಜಿಸುವ ನಿರ್ಧಾರ ಮಾಡಿದ್ದಾರೆ.
ಸಬೀರ್ ಹುಸೇನ್ ಎಂಬ ಶಿಕ್ಷಕ ಇಸ್ಲಾ ಧರ್ಮ ತ್ಯಜಿಸಲು ಮುಂದಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಜಮ್ಮು-ಕಾಶ್ಮೀರ ಸೇರಿದಂತೆ ಹಲವೆಡೆಗಳಲ್ಲಿ ಧರ್ಮವನ್ನು ಹಿಂಸೆಗಾಗಿ, ಆಯುಧವನ್ನಾಗಿ ಬಳಸಲಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ನಾನು ಇಸ್ಲಾಂ ತ್ಯಜಿಸುತ್ತಿದ್ದೇನೆ. ಯಾವ ಧರ್ಮದ ವ್ಯಾಪ್ತಿಗೂ ಒಳಪಡದೇ ಕೇವಲ ಮಾನವನಾಗಿ ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಏ.22ರಂದು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಉಗ್ರರು ಧರ್ಮವನ್ನು ಕೇಳಿ ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಉಗ್ರರ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿ ಒಟ್ಟು 28 ಜನರು ಬಲಿಯಾಗಿದ್ದರು. ಈ ಘಟನೆಹ್ಗಳಿಂದ ನೊಂದ ಶಿಕ್ಷಕ ಇದೀಗ ಇಸ್ಲಾಂ ಧರ್ಮದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.