ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ವಿದ್ಯಾರ್ಥಿಗೆ ನೀಡಿದ ಪ್ರೇಮ ಪತ್ರಗಳು ಆಕೆಯ ದೌರ್ಜನ್ಯದ ಪ್ರಮಾಣವನ್ನು ಬಹಿರಂಗಪಡಿಸಿವೆ. ಅಮೆರಿಕದ ನ್ಯಾಷನಲ್ ಸಿಟಿಯ ಲಿಂಕನ್ ಏಕ್ರೆಸ್ ಎಲಿಮೆಂಟರಿ ಶಾಲೆಯ ಶಿಕ್ಷಕಿ ಜಾಕ್ವೆಲಿನ್ ಮಾ ಅವರು 2022-2023 ಶೈಕ್ಷಣಿಕ ವರ್ಷಕ್ಕೆ ಸ್ಯಾನ್ ಡಿಯಾಗೋ ಕೌಂಟಿಯ “ವರ್ಷದ ಶಿಕ್ಷಕಿ” ಪ್ರಶಸ್ತಿಯನ್ನು ಸಹ ಪಡೆದಿದ್ದರು. ಈ ಹಿಂದೆ ಬಂಧಿತರಾಗಿದ್ದ ಆಕೆಗೆ ನ್ಯಾಯಾಲಯವು 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆಕೆ ಹಲವಾರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಳು.
ಬಲಿಪಶುವಿನ ತಾಯಿಯು ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಶಿಕ್ಷಕಿಯು ನೀಡಿದ ಪ್ರೇಮ ಪತ್ರವನ್ನು ಕಂಡುಕೊಂಡಳು. ನಂತರ, ತಾಯಿಯು ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದರು. ಪೋಷಕರು ತಮ್ಮ ಮಗನನ್ನು ಈ ಬಗ್ಗೆ ವಿಚಾರಿಸಿದಾಗ, ಶಿಕ್ಷಕಿಯು ಮೂರು ತಿಂಗಳಿನಿಂದ ತರಗತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಮತ್ತು ಬಲವಂತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸುತ್ತಿದ್ದರು ಎಂಬುದು ತಿಳಿದುಬಂದಿತು. ಶಿಕ್ಷಕಿಯು ಬಾಲಕನು ಈ ವಿಷಯವನ್ನು ಬಹಿರಂಗಪಡಿಸದಂತೆ ತಡೆಯಲು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ನೀಡುತ್ತಿದ್ದಳು.
ಜಿಲ್ಲಾ ವಕೀಲರು ಶಿಕ್ಷಕಿಯು ಮಕ್ಕಳ ಮೇಲೆ ಆಜೀವ ಪರ್ಯಂತದ ಆಘಾತವನ್ನು ಉಂಟುಮಾಡಿದ್ದಾರೆ ಮತ್ತು 30 ವರ್ಷಗಳ ಶಿಕ್ಷೆಯು ಸೂಕ್ತವಾಗಿದೆ ಎಂದು ಹೇಳಿದರು. ಜಾಕ್ವೆಲಿನ್ ಫೆಬ್ರವರಿಯಲ್ಲಿ ತಪ್ಪೊಪ್ಪಿಕೊಂಡಿದ್ದಳು. ತೀರ್ಪಿನ ನಂತರ, ಆಕೆ ವಿಷಾದ ವ್ಯಕ್ತಪಡಿಸಿದ್ದಳು. ಜಾಕ್ವೆಲಿನ್ ತಾನು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದೇನೆ, ಅವರ ಮೇಲೆ ತನ್ನ ಅಧಿಕಾರ ಮತ್ತು ನಿಯಂತ್ರಣವನ್ನು ಚಲಾಯಿಸಿದ್ದೇನೆ, ಅವರನ್ನು ಮೋಸಗೊಳಿಸಿದ್ದೇನೆ ಮತ್ತು “ಶಿಕ್ಷಕ ವೃತ್ತಿಗೆ ಕಳಂಕ ತಂದಿದ್ದೇನೆ” ಎಂದು ಹೇಳಿದಳು. “ಈ ವಯಸ್ಸಿನ ಹುಡುಗರು ಹೊರಗೆ ಆಡಬೇಕು, ನಿರ್ಭಯವಾಗಿರಬೇಕು… ನಾನು ಅವರ ಬಾಲ್ಯವನ್ನು ಕಿತ್ತುಕೊಂಡೆ” ಎಂದು ಕೈಕೋಳ ಹಾಕಿಸಿಕೊಂಡು ಕಣ್ಣೀರಿಟ್ಟಳು.