ವಿದ್ಯಾರ್ಥಿಗಳ ಎದುರೇ ಶಾಲಾ ಶಿಕ್ಷಕಿಗೆ ಪತಿಯಿಂದ ‘ತ್ರಿವಳಿ ತಲಾಕ್’….!

Teacher Given 'Triple Talaq' By Husband In Front Of Students In UP: Police

ಪತಿಯೊಬ್ಬ ಶಿಕ್ಷಕಿಯಾಗಿರುವ ತನ್ನ ಪತ್ನಿಯ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಎದುರೇ ಆಕೆಗೆ ತ್ರಿವಳಿ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗ ಮಾಡುತ್ತಿರುವ ಫಿರೋಜಾಬಾದ್ ಜಿಲ್ಲೆಯ ನಿವಾಸಿ ಮಹಮ್ಮದ್ ಶಕೀಲ್, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತನ್ನ ಪತ್ನಿ ಪಾಠ ಮಾಡುತ್ತಿದ್ದಾಗಲೇ ವಿದ್ಯಾರ್ಥಿಗಳ ಎದುರು ತ್ರಿವಳಿ ತಲಾಕ್ ನೀಡುವ ಮೂಲಕ ಶಾಕ್ ನೀಡಿದ್ದಾನೆ.

2020 ರ ಸೆಪ್ಟೆಂಬರ್ 1 ರಂದು ಈತ ಶಿಕ್ಷಕಿ ಜೊತೆ ವಿವಾಹವಾಗಿದ್ದ ಎನ್ನಲಾಗಿದ್ದು, ಬಳಿಕ ಪತ್ನಿಗೆ ಯಾವುದೇ ಮಾಹಿತಿ ನೀಡದೆ ಸೌದಿ ಅರೇಬಿಯಾಗೆ ತೆರಳಿದ್ದ. ಪತಿ ಮನೆಯವರು ವರದಕ್ಷಿಣೆ ವಿಚಾರವಾಗಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದ್ದು, ಇದೀಗ ತನ್ನ ಮನೆಯವರ ಒತ್ತಡಕ್ಕೆ ಮಣಿದು ಪತ್ನಿಗೆ ತಲಾಕ್ ನೀಡಿದ್ದಾನೆ. ಈಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಹಮ್ಮದ್ ಶಕೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read