ಬೆಳಗಾವಿ: ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪ್ರವಾಸಕ್ಕೆ ಹೋಗಿ ವಾಪಾಸ್ ಆಗಿದ್ದ ಶಿಕ್ಷಕರೊಬ್ಬರು ಮನೆಯ ಗೇಟ್ ನಲ್ಲಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪ್ರವೀಣ್ ಕುಮಾರ್ ಜಿ. ಕಡಪಟ್ಟಿಮಠ (41) ಮೃತ ಪ್ರೌಢ ಶಾಲಾ ಶಿಕ್ಷಕ. ಮನೆಯ ಗೇಟ್ ತೆಗೆಯುತ್ತಿದ್ದಂತೆ ಗೇಟ್ ಗೆ ವಿದ್ಯುತ್ ಪ್ರವಹಿಸಿ ಈ ದುರಂತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ಯ ಪ್ರಮೋದ್ ನಗರದಲ್ಲಿ ನಡೆದಿದೆ.
ವಿವಾಹ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಪ್ರವೀಣ್ ಕುಮಾರ್ ದಂಪತಿ ಪ್ರವಾಸಕ್ಕೆ ಹೋಗಿ ಆಗಷ್ಟೇ ಮನೆಗೆ ಹಿಂತಿರುಗಿದ್ದರು. ಮನೆಯ ಗೇಟ್ ತೆಗೆಯುತ್ತಿದ್ದಂತೆಯೇ ಕರೆಮ್ಟ್ ಶಾಕ್ ಹೊಡೆದಿದೆ. ಸ್ಥಳದಲ್ಲೇ ಪ್ರವೀಣ್ ಕುಮಾರ್ ಸಾವನ್ನಪ್ಪಿದ್ದಾರೆ.
ಮೂಲತಃ ತೇರದಾಳ ಗ್ರಾಮದವರಾದ ಪ್ರವೀಣ್ ಕುಮಾರ್ ಸತ್ತಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.