SHOCKING NEWS: ಸ್ಕೂಲ್ ನಲ್ಲಿ ಗಲಾಟೆ ಮಾಡಿದ್ದಕ್ಕೆ ಬಾಲಕಿಯ ಭುಜದ ಮೂಳೆ ಮುರಿಯುವಂತೆ ಹೊಡೆದ ಟೀಚರ್?

ಬೆಂಗಳೂರು: ಇತ್ತೀಚೆಗೆ ಶಿಕ್ಷಕಿಯೊಬ್ಬರು ಬಾಲಕನ ಹಲ್ಲು ಮುರಿಯುವಂತೆ ಹೊಡೆದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ನಡೆದಿದೆ. ಟೀಚರ್ ಓರ್ವರು ವಿದ್ಯಾರ್ಥಿನಿಗೆ ಭುಜದ ಮೂಳೆ ಮುರಿಯುವಂತೆ ಹೊಡೆದಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಶಾಲೆಯಲ್ಲಿ ನಡೆದಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಅಂಬೇಡ್ಕರ್ ಮೆಮೋರಿಯಲ್ ಶಾಲೆಯ ಕನ್ನಡ ಟೀಚರ್ ಮಮತಾ ವಿರುದ್ಧ ಈ ಆರೋಪ ಕೇಳಿಬಂದಿದೆ. ಶಿಕ್ಷಕಿಯ ಹೊಡೆತಕ್ಕೆ ಅನ್ನಪೂರ್ಣ ಎಂಬ ಬಾಲಕಿಯ ಬಲಗೈ ಭುಜದ ಮೂಳೆ ಮುರಿದಿದೆ.

ಅ.28ರಂದು ಬಾಲಕಿ ಅನ್ನಪೂರ್ಣ ಹಾಗೂ ಇತರ ಮಕ್ಕಳು ಶಾಲೆಯಲ್ಲಿ ಗಲಾಟೆ ಮಾಡುತ್ತಿದ್ದರು. ಗಲಾಟೆ ಮಾಡಿದ್ದಕ್ಕೆ ಕನ್ನಡ ಟೀಚರ್ ಮಮತಾ, ಅನ್ನಪೂರ್ಣ ಅವಳನ್ನು ಕೋಲಿನಿಂದ ಥಳಿಸಿದ್ದಾರಂತೆ. ಕೈ ಭುಜದ ಮೇಲೆ ಏಟು ಬಿದ್ದ ಪರಿಣಾಮ ಬಾಲಕಿ ಬಲಗೈ ಮೂಳೆ ಮುರಿದಿದೆ. ಎಕ್ಸ್ ರೇ ವೇಳೆ ಮೂಳೆ ಮುರಿದಿರುವುದು ದೃಢಪಟ್ಟಿದೆ.

ಬಾಲಕಿ ಮನೆಗೆ ಬಂದವಳು ಕೈ ನೋವು ಎನ್ನುತ್ತಿದ್ದಳು. ಮಾರನೆಯ ದಿನ ತೀವ್ರ ಜ್ವರ ಬಂದಿದೆ. ವಿಚಾರಿಸಿದಾಗ ಟೀಚರ್ ಮಮತಾ ಹೊಡೆದಿದ್ದಾರೆ ಎಂದಿದ್ದಾಳೆ. ಮನೆಯಲ್ಲಿ ಹೇಲಿದರೆ ಮತ್ತೆ ಟೀಚರ್ ಬೈಯ್ಯುತ್ತಾರೆ ಎಂದು ಹೇಳಿಲ್ಲ ಎಂದಿದ್ದಾಳೆ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ, ಎಕ್ಸ ರೇ ಮಾಡಿಸಿದಾಗ ವೈದ್ಯರು ಬಲಗೈ ಬುಜದ ಮೂಳೆ ಮುರಿದಿದೆ ಎಂದಿದ್ದಾರೆ. ಈ ಬಗ್ಗೆ ಸ್ಕೂಲ್ ಗೆ ಹೋಗಿ ಟೀಚರ್ ವಿಚಾರಿಸಿದರೆ ಸಮಜಾಯಿಷಿ ನೀಡಿದ್ದಾರೆ ಎಂದು ಬಾಲಕಿ ತಾಯಿ ನಾಗರತ್ನ ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಶಿಕ್ಷಕರ ಕೋಪಕ್ಕೆ ಮಕ್ಕಳು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read