BIG NEWS: ಟಿಬಿ ಡ್ಯಾಂ ಗೇಟ್ ಅಳವಡಿಕೆ ಚುರುಕು; ನಾಳೆಯೇ ಶುಭ ಸುದ್ದಿ ಕೊಡ್ತೀವಿ ಎಂದ ತಜ್ಞ ಕನ್ಹಯ್ಯ ನಾಯ್ಡು

ಕೊಪ್ಪಳ: ತುಂಗಭದ್ರಾ ಡ್ಯಾಂ 19ನೇ ಗೇಟ್ ಮುರಿದುಬಿದ್ದು ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಅಪಾರಪ್ರಮಾಣದ ನೀರು ಹರಿದುಹೋಗುತ್ತಿದೆ. ಈ ನಡುವೆ ಇಂದಿನಿಂದ ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಆರಂಭವಾಗಿದೆ.

ತಜ್ಞರ ತಂಡ ಹಾಗೂ ಸಿಬ್ಬಂದಿಗಳು ತುಂಗಭದ್ರಾ ಡ್ಯಾಂ ಬಳಿ ಗೇಟ್ ಗಳನ್ನು ಸಾಗಿಸಿದ್ದು, ಗೇಟ್ ಅಳವಡಿಕೆ ಕಾರ್ಯ ಚುರುಕುಗೊಂಡಿದೆ. ಈ ಬಗ್ಗೆ ತಜ್ಞ ಕನ್ಹಯ್ಯ ನಾಯ್ಡು, ಪ್ರತಿಕ್ರಿಯಿಸಿದ್ದು, ಇಂದಿನಿಂದ ಗೇಟ್ ಅಳವಡಿಕೆ ಆರಂಭವಾಗಿದೆ. ಟಿಬಿ ಡ್ಯಾಂ ಗೆ ಗೇಟ್ ಅಳವಡಿಕೆ ಒಂದು ಚಾಲೇಂಜ್. ಇದು ಅಷ್ಟು ಸುಲಭದ ಕೆಲಸವಲ್ಲ ಎಂದಿದ್ದಾರೆ.

ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ನಾಳೆಗೆ ಶುಭ ಸುದ್ದಿ ಕೊಡುತ್ತೇವೆ. ಗೇಟ್ ಅಳವಡಿಸಿದರೆ ಬಳಿಕ ಅಷ್ಟೊಂದು ಕಷ್ಟವಾಗಲ್ಲ. ಇದೊಂದು ದೊಡ್ಡ ಚಾಲೇಂಜ್ ಆಗಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read