ಇಂಡಿಗೋ ವಿಮಾನ ಡಿಕ್ಕಿ: ರನ್ ವೇನಲ್ಲೇ ಮುರಿದು ಬಿದ್ದ ಏರ್ ಇಂಡಿಯಾ ರೆಕ್ಕೆ: ತನಿಖೆಗೆ ಆದೇಶ

ನವದೆಹಲಿ: ಟ್ಯಾಕ್ಸಿಯಿಂಗ್ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನಗಳು ಇಂದು ಬೆಳಿಗ್ಗೆ ಕೋಲ್ಕತ್ತಾದ ರನ್‌ ವೇಯಲ್ಲಿ ತೀರಾ ಸಮೀಪಕ್ಕೆ ಬಂದು ರೆಕ್ಕಿಗೆ ಟಚ್ ಆಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ನೂರಾರು ಪ್ರಯಾಣಿಕರು, ಸಿಬ್ಬಂದಿ ಪಾರಾಗಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಡಿಕ್ಕಿಯಿಂದಾಗಿ ಚೆನ್ನೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನದ ರೆಕ್ಕೆಯ ತುದಿ ಮುರಿದು ರನ್‌ವೇ ಮೇಲೆ ಬಿದ್ದಿದ್ದು, ದರ್ಭಾಂಗಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ರೆಕ್ಕೆಗೆ ಹಾನಿಯಾಗಿದೆ.

ಡಿಜಿಸಿಎ ವಿಸ್ತೃತ ತನಿಖೆಗೆ ಆದೇಶ

ಕೊಲ್ಕತ್ತಾದಲ್ಲಿ ನಡೆದ ಘಟನೆ ಬಗ್ಗೆ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(DGCA) ತನಿಖೆಗೆ ಆದೇಶಿಸಿದೆ. ನಾವು ಈ ವಿಷಯದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದ್ದೇವೆ. ಇಂಡಿಗೋ ಏರ್‌ಲೈನ್ಸ್‌ನ ಇಬ್ಬರೂ ಪೈಲಟ್‌ಗಳನ್ನು ಆಫ್-ರೋಸ್ಟರ್ ಮಾಡಲಾಗಿದೆ. ತನಿಖೆಯ ಸಮಯದಲ್ಲಿ ಸಿಬ್ಬಂದಿಯನ್ನು ಸಹ ವಿಚಾರಣೆಗೆ ಒಳಪಡಿಸಲಾಗುವುದು. ಎರಡೂ ವಿಮಾನಗಳನ್ನು ವಿವರವಾದ ತಪಾಸಣೆಗೊಳಪಡಿಸಲಾಗುವುದು ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read