ಬೆಂಗಳೂರು: ರಾಜ್ಯದ ಜನತೆಗೆ ಸಾಲು ಸಾಲು ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಉಕ್ಕು ಹಾಗೂ ಆಟೋ ಮೊಬೈಲ್ ದರ ಹೆಚ್ಚಳ, ಟೋಲ್ ದರ ಹೆಚ್ಚಳ, ಡೀಸೆಲ್ ದರ ಹೆಚ್ಚಳಗಳ ಪರಿಣಾಮ ಇದೀಗ ಟ್ಯಾಕ್ಸಿ, ಕ್ಯಾಬ್ ದರ ಹೆಚ್ಚಳವಾಗಿದೆ.
ಇಂದಿನಿಂದ ಟ್ಯಾಕ್ಸಿ, ಕ್ಯಾಬ್ ದರಗಳು ಹೆಚ್ಚಳವಾಗಿದ್ದು, ಪ್ರತಿ ಕಿ.ಮೀ ಮೇಲೆ 3 ರೂ ನಿಂದ 5 ರೂವರೆಗೆ ದರ ಹೆಚ್ಚಳ ಮಾಡಲಾಗಿದೆ.
ಕೇಂದ್ರ ಸರ್ಕಾರ ಟೋಲ್ ದರ ಶೇ.5ರಷ್ಟು ಹೆಚ್ಚಳ ಮಾಡಿದೆ. ಇತ್ತ ರಾಜ್ಯ ಸರ್ಕಾರ ವಾಹನ ತಯಾರಿಕಾ ಕಂಪನಿಗಳು ಪ್ರತಿ ಕಾರಿನ ಮೇಲೆ ಶೇ. 3ರಿಂದ ಶೇ.4ರಷ್ಟು ದರ ಹೆಚ್ಚಳ ಮಾಡಿದೆ. ಎಲ್ಲಾ ದರ ಹೆಚ್ಚಳಗಳಿಂದಗಿ ಟೂರ್ಸ್ ಆಂಡ್ ಟ್ರಾವಲ್ಸ್ ಅಸೋಸಿಯೇಷನ್ ತಮ್ಮ ಕ್ಯಾಬ್ ಗಳ ಕಿ.ಮೀ ದರ ಏರಿಕೆ ಮಾಡಿದೆ.