ಸುರಕ್ಷತೆಯಲ್ಲಿ ಮತ್ತೆ ತನ್ನ ಸಾಮರ್ಥ್ಯ ಪ್ರೂವ್ ಮಾಡಿದ ಟಾಟಾ ಪಂಚ್; ಕಾರ್ ಗೆ ಹಾನಿಯಾದ್ರೂ ಬದುಕುಳಿದ ಮಾಲೀಕ !

Tata Punch's Safety Shines In Gujarat Mishap: A Tale of Survival

ತನ್ನ ಗುಣಮಟ್ಟದ ಕಾರಣದಿಂದ ಅನೇಕ ಬಾರಿ ಪ್ರಶಂಸೆಗೊಳಗಾಗಿರುವ ಟಾಟಾ ಮೋಟಾರ್ಸ್ ಮತ್ತೊಮ್ಮೆ ಗುಣಮಟ್ಟದಲ್ಲಿ ತನಗೆ ಸರಿಸಾಟಿಯಿಲ್ಲ ಎಂಬುದನ್ನ ಸಾಬೀತುಪಡಿಸಿದೆ. ಅಪಘಾತದ ಬಳಿಕ ಕಾರ್ ನ ಗುಣಮಟ್ಟದಿಂದಾಗಿ ಬದುಕುಳಿದ ಅನೇಕರು ಟಾಟಾ ಕಾರ್ ನಿರ್ಮಾಣ ಮಾಡುವವರಿಗೆ ಧನ್ಯವಾದ ಹೇಳಿದ್ದಾರೆ.

ಅದಕ್ಕೆ ನಿದರ್ಶನವೆಂಬಂತೆ ಮತ್ತೊಂದು ಘಟನೆಯಲ್ಲಿ ಗುಜರಾತ್ ನ ವ್ಯಕ್ತಿಯೊಬ್ಬರು ಅಪಘಾತದಿಂದ ಪಾರಾಗಿದ್ದು ಟಾಟಾ ಪಂಚ್ ನಿರ್ಮಾಣ ಸಂಸ್ಥೆಗೆ ಧನ್ಯವಾದ ಹೇಳಿದ್ದಾರೆ. ಗುಜರಾತ್‌ನ ಆಂಗ್ಲೇಶ್ವರ ಮತ್ತು ಬಾರ್ಡೋಲಿ ನಡುವಿನ ಮಾರ್ಗದಲ್ಲಿ ಅಪಘಾತ ನಡೆದಿದೆ ಎಂದು ವರದಿಯಾಗಿದೆ. ಭೀಕರ ಅಪಘಾತದ ಬಳಿಕವೂ ಕಾರ್ ನಲ್ಲಿದ್ದವರೆಲ್ಲಾ ಬದುಕುಳಿದಿದ್ದಾರೆ.

ಆಂಗ್ಲೇಶ್ವರ ಮತ್ತು ಬಾರ್ಡೋಲಿ ನಡುವಿನ ಮಾರ್ಗದಲ್ಲಿ ಟಾಟಾ ಪಂಚ್ ಕಾರ್ ಅನೇಕ ಬಾರಿ ಪಲ್ಟಿಯಾದ ಕಾರಣ ನಿಯಂತ್ರಣ ತಪ್ಪಿ ಪಕ್ಕಕ್ಕೆ ಉರುಳಿಬಿತ್ತು. ಈ ವೇಳೆ ಕಾರ್ ನ ಮುಂಭಾಗ ಗಂಭೀರವಾಗಿ ಹಾನಿಗೊಳಗಾದರೂ ಕಾರ್ ನಲ್ಲಿದ್ದವರಿಗೆ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಕಾರ್ ನ ಮಾಲೀಕರೇ ಚಾಲಕನ ಸೀಟ್ ನಲ್ಲಿದ್ದು ಸೀಟ್ ಬೆಲ್ಟ್ ಧರಿದ್ದರು. ಅಪಘಾತವಾಗ್ತಿದ್ದಂತೆ ಏರ್ ಬ್ಯಾಗ್ ಗಳು ಓಪನ್ ಆಗಿದ್ದು ಯಾವುದೇ ಗಾಯಗಳಾಗದಂತೆ ಕಾರ್ ನಲ್ಲಿದ್ದವರನ್ನ ಕಾಪಾಡಿದೆ.

ಕಾರ್ ನ ಮುಂಭಾಗದ ಚಕ್ರ ಕೂಡ ಹೊರಬಂದಿತ್ತು. ಸಸ್ಪೆಕ್ಷನ್ ಮುರಿದುಹೋಗಿದೆ. ಕಾರ್ ಫ್ರೇಮ್ ಕೂಡ ಹಾಳಾಗಿದೆ. ಆದರೆ ನಮಗೇನೂ ಆಗಿರಲಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಹೊಸದಾಗಿ ಕಾರು ಖರೀದಿಸುವವರು ವಾಹನದ ವೈಶಿಷ್ಟ್ಯಗಳು ಮತ್ತು ಮೈಲೇಜ್ ನೋಡುವುದರ ಜೊತೆಗೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಬೇಕು. ಸಾಕಷ್ಟು ಸಂಶೋಧನೆಯ ನಂತರ ಟಾಟಾ ಪಂಚ್ ಅನ್ನು ಆಯ್ಕೆ ಮಾಡಿಕೊಂಡೆ. ಇನ್ನು ತನ್ನ ನಿರ್ಧಾರ ತಪ್ಪಾಗಿಲ್ಲ ಮತ್ತು ನಮ್ಮ ಜೀವ ಉಳಿಸಿದ ಟಾಟಾ ಪಂಚ್ ಗೆ ಧನ್ಯವಾದ ಎಂದು ಹೇಳಿದ್ದಾರೆ.

ವಿಶೇಷವಾಗಿ ಗ್ಲೋಬಲ್ NCAP ನ ಕಠಿಣ ಪರೀಕ್ಷೆಗಳಲ್ಲಿ ಟಾಟಾ ಪಂಚ್ 5-ಸ್ಟಾರ್ ರೇಟಿಂಗ್‌ ಪಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read