ಅರ್ಚಕನಾಗಲು ಸರ್ಕಾರಿ ನೌಕರಿಯನ್ನೇ ಬಿಟ್ಟ ವ್ಯಕ್ತಿ….! ಇದರ ಹಿಂದಿದೆ ಒಂದು ಮಹತ್ತರ ‘ಕಾರಣ’

ಸರ್ಕಾರಿ ಕೆಲಸ ಬೇಕು ಅಂತ ಪ್ರತಿಯೊಬ್ಬರೂ ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ, ಸರ್ಕಾರಿ ಕೆಲಸ ಬಿಟ್ಟು ಅರ್ಚಕರ ಕೆಲಸ ಮಾಡ್ತಿದ್ದಾರೆ. ತಮ್ಮ ಜನಾಂಗದ ಸಂಪ್ರದಾಯವನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಅವರು ಈ ಕೆಲಸಕ್ಕೆ ಮುಂದಾಗಿದ್ದಾರೆ.

ಹೆಸರು ಚಂದ್ರ ಬೆಲ್ಲನ್. ಇವರು ತಮಿಳುನಾಡಿನ ಊಟಿಯ ಗೋಕಲ್ ಗ್ರಾಮದಲ್ಲಿ ನೆಲೆಸಿರುವ ಕೋಥರ್ ಬುಡಕಟ್ಟಿಗೆ ಸೇರಿದವರು. ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯಲ್ಲಿ ಉದ್ಯೋಗವಿತ್ತು. ಅದನ್ನು ತ್ಯಜಿಸಿ ಅವರು  ಬುಡಕಟ್ಟಿನ ಸಂಪ್ರದಾಯಗಳನ್ನು ಅನುಸರಿಸಿ ಅರ್ಚಕರಾಗಿದ್ದಾರೆ.

ಲಕ್ಷ ಅಥವಾ ಕೋಟಿ ರೂಪಾಯಿ ಗಳಿಸಿದ್ರೂ ನಮ್ಮ ಸಂಸ್ಕೃತಿ, ಸಂಪ್ರದಾಯ ಬಿಡಬಾರದು ಎಂದು ಬೆಲ್ಲನ್‌ ಹೇಳಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ನಿವೃತ್ತಿ ಪಡೆದಿದ್ದಾರೆ. ನಂತ್ರ ತಮ್ಮ ಗ್ರಾಮಕ್ಕೆ ಬಂದು ಪೂಜಾರಿ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ.

ಕೋಥರ್ ಸಮುದಾಯದಲ್ಲಿ ವನ ಪೂಜೆ ಮಹತ್ವ ಪಡೆದಿದೆ. ಭೀಕರ ಬರಗಾಲ ಬಂದಾಗ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡುವ ಅವರು ನೈವೇದ್ಯ, ಪೂಜೆ ಮಾಡುತ್ತಾರೆ. ಅಲ್ಲಿಗೆ ಹೋಗಿ ಪೂಜೆ ಮಾಡಿದ ತಕ್ಷಣ ಮಳೆಯಾಗುತ್ತದೆ. ಅವರ ದೇವರು ಗ್ರಾಮದಿಂದ 5 ಕಿ.ಮೀ ದೂರದಲ್ಲಿ ಅರಣ್ಯದಲ್ಲಿ ನೆಲೆಗೊಂಡಿದೆ.

ಸೋಮವಾರಗಳನ್ನು ದೇವತೆಗೆ ಮಂಗಳಕರ ಎಂದು ಅವರು ಭಾವಿಸಿದ್ದಾರೆ. ಹಾಗಾಗಿ ಆ ದಿನ ಅವರು ಕೃಷಿ ಅಥವಾ ಇತರ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಬೆಲ್ಲನ್‌ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read