ಅಪ್ರಾಪ್ತನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ; ʼಪೋಕ್ಸೋʼ ಕಾಯ್ದೆ ಅಡಿ ವಿವಾಹಿತ ಮಹಿಳೆ ‌ʼಅರೆಸ್ಟ್ʼ

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ 17 ವರ್ಷದ ಹುಡುಗನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 28 ವರ್ಷದ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮ ಸಂಬಂಧದ ನೆಪದಲ್ಲಿ ಈ ಮಹಿಳೆ ಅಪ್ರಾಪ್ತನನ್ನು ಅಪಹರಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 18ರ ಶನಿವಾರ ಈತ ಕಾಣೆಯಾದ ನಂತರ ಘಟನೆ ಬೆಳಕಿಗೆ ಬಂದಿದೆ.

ಹುಡುಗ ಕಾಣೆಯಾದ ತಕ್ಷಣ, ಅವನ ಕುಟುಂಬ ಸದಸ್ಯರು ಪೆರಿಯಪಾಲಯಂ ಪೊಲೀಸರನ್ನು ಸಂಪರ್ಕಿಸಿ ಕಾಣೆಯಾದ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ವಿನೋದಿನಿ ಎಂಬ ಮಹಿಳೆ ಹುಡುಗನಿಗೆ ಹತ್ತಿರವಾಗಿದ್ದಳು ಎಂದು ಕಂಡುಕೊಂಡಿದ್ದು, ಆ ಮಹಿಳೆಯೂ ಸಹ ನಾಪತ್ತೆಯಾಗಿದ್ದಳು.

ತನಿಖೆಯ ಸಂದರ್ಭದಲ್ಲಿ, ಪೊಲೀಸರು ಮಹಿಳೆ ಮತ್ತು ಕಾಣೆಯಾದ ಹುಡುಗನನ್ನು ಆ ಪ್ರದೇಶದಲ್ಲಿರುವ ಅವಳ ಸಂಬಂಧಿಯ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ. ಪೊಲೀಸರು ಹುಡುಗನನ್ನು ರಕ್ಷಿಸಿದಾಗ, ಆರೋಪಿ ಮಹಿಳೆ ವಿವಾಹಿತಳಾಗಿದ್ದು ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ವಿನೋದಿನಿಯನ್ನು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

ಬಂಧನದ ನಂತರ, ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ಅಂಬತ್ತೂರಿನ ಮಹಿಳೆಯೊಬ್ಬರು 17 ವಯಸ್ಸಿನ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಳು. ಸತ್ಯಪ್ರಿಯಾ ಎಂಬ ಆ ಮಹಿಳೆ ತನ್ನ ಮಗನ ಸ್ನೇಹಿತನ ಮನೆಯಲ್ಲಿ ಎರಡು ತಿಂಗಳು ಇದ್ದು ಆ ಅಪ್ರಾಪ್ತ ವಯಸ್ಕ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಳು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read