ಮಧುರೈ: ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತ ವಿನಿತ್ ಎಂದು ಕರೆಯಲ್ಪಡುವ ಅರಿವಳಗನ್ ಎಂಬ 29 ವರ್ಷದ ಯುವಕನನ್ನು ಐದು ಜನರು ಬರ್ಬರವಾಗಿ ಕೊಂದಿದ್ದಾರೆ.
ಮಧುರೈ ನಿವಾಸಿಯಾಗಿರುವ ಯುವಕ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ತಮಿಳುನಾಡಿನ ಕಾರೈಕುಡಿ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಈ ಭೀಕರ ಹತ್ಯೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೀಡಿಯೋ ಫೂಟೇಜ್‌ನಲ್ಲಿ ಕಂಡುಬರುವಂತೆ, ವಿನಿತ್ ರಸ್ತೆಗೆ ಹೋದಾಗ, ಎಸ್‌ಯುವಿಯಲ್ಲಿ ಬಂದ ಐದು ಜನರ ಗುಂಪು ಅವನನ್ನು ಸುತ್ತುವರೆದು ಹಿಂಬಾಲಿಸಿತು. ವಿನಿತ್ ಮುಗ್ಗರಿಸಿ ನೆಲದ ಮೇಲೆ ಬೀಳುತ್ತಿದ್ದಂತೆ, ದುಷ್ಕರ್ಮಿಗಳು ಆತನ ಮೇಲೆ ದೊಣ್ಣೆ ಮತ್ತು ರಾಡ್‌ಗಳನ್ನು ಬಳಸಿ ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಪಕ್ಕದಲ್ಲಿದ್ದವರು ಗಮನಿಸಿದ್ದಾರೆ.
ಸಿಸಿಟಿವಿಯಲ್ಲಿ ಕಂಡುಬರುವ ವಿಡಿಯೋದಲ್ಲಿ, ನೀಲಿ ಶರ್ಟ್ ಧರಿಸಿದ ವ್ಯಕ್ತಿ ಮಧ್ಯಪ್ರವೇಶಿಸಿ ಆತನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಆದರೆ ಪ್ರಯತ್ನಗಳು ವಿಫಲವಾಗಿವೆ. ಘಟನೆಯ ನಂತರ, ಐವರು ದುಷ್ಕರ್ಮಿಗಳು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ, ವಿನಿತ್ ಅವರನ್ನು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಸಾಗಿಸುವ ವೇಳೆಗೆ ಮೃತಪಟ್ಟಿದ್ದಾರೆ.
https://twitter.com/Naju_Here/status/1670339395055161345?ref_src=twsrc%5Etfw%7Ctwcamp%5Etweetembed%7Ctwterm%5E1670339395055161345%7Ctwgr%5E72af2c341d1d1a8791ecd58b06bb575e37a43d60%7Ctwcon%5Es1_&ref_url=https%3A%2F%2Fwww.freepressjournal.in%2Findia%2Ftamil-nadu-crime-cctv-captures-gruesome-murder-of-29-year-old-murder-accused-by-5-men-in-karaikudi