ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಗೆ ವಂಚನೆ; FIR ದಾಖಲು

ಬೆಂಗಳೂರು: ತಮಿಳು ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಯುವತಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳು ನಟ ರಾಘವ ಲಾರೆನ್ಸ್ ಅವರ 25ನೇ ಸಿನಿಮಾ ಹಂಟರ್ ನಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಂಬಿಸಿ ಯುವತಿಗೆ ಲಕಾಂಕ್ಷರ ರೂಪಾಯಿ ವಂಚಿಸಲಾಗಿದೆ. ನಂದಿತಾ ಶೆಟ್ಟಿ ಎಂಬ ಯುವತಿ ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಇನ್ ಸ್ಟಾ ಗ್ರಾಮ್ ನಲ್ಲಿ ಮೂವಿ ಆಂಡ್ ಲಿಂಕ್ ಮೂಲಕ ಸುರೇಶ್ ಕುಮಾರ್ ಎಂಬಾತ ಪರಿಚಯವಾಗಿದ್ದಾನೆ . ತಾನು ಹಂಟರ್ ಮೂವಿ ಕಾಸ್ಟಿಂಗ್ ಡೈರೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ.

ಬಳಿಕ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ 1.71 ಲಕ್ಷ ಹಣ ಪಡೆದಿದ್ದಾನೆ. ವಿದೇಶದಲ್ಲಿ ಶೂಟಿಂಗ್ ಇರುತ್ತದೆ. ಪಾಸ್ ಪೋರ್ಟ್, ಟಿಕೆಟ್ ಚಾರ್ಜ್, ಅಗ್ರಿಮೆಂಟ್, ಸ್ಟಾಂಪ್ ಡ್ಯೂಟಿ, ಆರ್ಟಿಸ್ಟ್ ಕಾರ್ಡ್ ಗೆ ಎಂದು ಹೇಳಿ ಹಣ ಪಡೆದಿದ್ದಾನೆ. ಹೀಗೆ ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡ ವ್ಯಕ್ತಿಯ ಸುಳಿವಿಲ್ಲದಾಗಿದೆ.

ಅನುಮಾನಗೊಂಡ ಯುವತಿ ಪರಿಶೀಲಿಸಿದಾಗ ತಾನು ಮೋಸ ಹೋಗಿದ್ದು ಅರಿವಾಗಿದೆ. ಕೋಣನಕುಂಟೆ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read