‘ಹೆಲ್ಮೆಟ್’ ಧರಿಸದೆ ಬೈಕ್ ಚಾಲನೆ; ಖ್ಯಾತ ನಟನಿಗೆ ಬಿತ್ತು ದಂಡ….!

ತಮಿಳು ಚಿತ್ರರಂಗದಲ್ಲಿ ಟಾಪ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ಪ್ರಶಾಂತ್ ಹೆಲ್ಮೆಟ್ ಧರಿಸದೆ ಮೋಟಾರ್ ಸೈಕಲ್ ಚಲಾಯಿಸಿದ ವಿಡಿಯೋ ವೈರಲ್ ಆದ ನಂತರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಚೆನ್ನೈನಲ್ಲಿ ಬೈಕ್ ಚಲಾಯಿಸುತ್ತಲೇ ಅವರು ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದರು.

ವಿಡಿಯೋದಲ್ಲಿ ಪ್ರಶಾಂತ್ ಚೆನ್ನೈನ ಜನನಿಬಿಡ ಬೀದಿಗಳಲ್ಲಿ ಬೈಕ್ ಚಲಾಯಿಸುತ್ತಾ, ಹಿಂಬದಿ ಕೂತಿದ್ದ ಪತ್ರಕರ್ತೆಗೆ ಸಂದರ್ಶನ ನೀಡಿದ್ದಾರೆ. ಹೆಲ್ಮೆಟ್ ಇಲ್ಲದೆಯೇ ಬೈಕ್ ಓಡಿಸಿಕೊಂಡು ಇಬ್ಬರು ಸಂಭಾಷಣೆಯಲ್ಲಿ ತೊಡಗಿ ನಗರ ಸುತ್ತಿದ್ದಾರೆ.

ಸಂದರ್ಶನವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೆಟ್ಟಿಗರು ನಟನ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಅವರು ಸೆಲೆಬ್ರಿಟಿ ಎಂಬ ಕಾರಣಕ್ಕಾಗಿ ಚೆನ್ನೈ ಟ್ರಾಫಿಕ್ ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಟೀಕಿಸಿದರು.

ನಟನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ನಂತರ ಗ್ರೇಟರ್ ಚೆನ್ನೈ ಟ್ರಾಫಿಕ್ ಪೊಲೀಸರು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಪ್ರಮುಖ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಬೈಕ್ ಚಾಲಕ ಅಂದರೆ ನಟ ಮತ್ತು ಹಿಂಬದಿ ಸವಾರರಿಗೆ 2,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಈ ವಿವಾದದ ಬಗ್ಗೆ ಪ್ರಶಾಂತ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಸದ್ಯ ಪ್ರಶಾಂತ್ ತಮ್ಮ ಮುಂಬರುವ ಚಿತ್ರ ಅಂಧಗನ್‌ನ ಪ್ರಚಾರಗಳಲ್ಲಿ ನಿರತರಾಗಿದ್ದಾರೆ. ಈ ಚಿತ್ರವು 2018 ರಲ್ಲಿ ಬಿಡುಗಡೆಯಾದ ಆಯುಷ್ಮಾನ್ ಖುರಾನಾ ಅವರ ಅಂಧಧುನ್‌ನ ಅಧಿಕೃತ ರಿಮೇಕ್ ಆಗಿದೆ. ಅಂಧಗನ್ ಆಗಸ್ಟ್ 9 ರಂದು ಬೆಳ್ಳಿತೆರೆಗೆ ಬರಲು ಸಿದ್ಧವಾಗಿದೆ.

https://twitter.com/ChennaiTraffic/status/1818975933644124383?ref_src=twsrc%5Etfw%7Ctwcamp%5Etweetembed%7Ctwterm%5E1818975933644124383%7Ctwgr%5E4b1359477ad

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read