ಕೈ ಮೇಲೆ ತಮ್ಮ ಹಚ್ಚೆ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿಯಾದ ನಟಿ ತಮನ್ನಾ….!

ತಮ್ಮ ಮೆಚ್ಚಿನ ಸೆಲೆಬ್ರಿಟಿಗಳು ಸಿಕ್ಕಿ ಒಂದೆರಡು ಸೆಕೆಂಡ್ ತಮ್ಮನ್ನು ’ಹಾಯ್’ ಎಂದರೆ ಸಾಕು ಜನಸಾಮಾನ್ಯರು ರೋಮಾಂಚನಗೊಳ್ಳುತ್ತಾರೆ. ಖುಷಿಯಾದ ಮೂಡ್‌ನಲ್ಲಿರುವ ವೇಳೆ ಸೆಲೆಬ್ರಿಟಿಗಳು ಸಹ ತಂತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ಹಾಗೂ ಫೋಟೋಗಳನ್ನು ತೆಗೆದುಕೊಳ್ಳಲು ಸಹಕರಿಸುತ್ತಾರೆ.

ಬಾಹುಬಲಿ ನಟಿ ತಮನ್ನಾ ತಮ್ಮ ಹುಚ್ಚು ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ತನ್ನ ಕೈ ಮೇಲೆ ತಮನ್ನಾ ಮುಖದ ಹಚ್ಚೆ ಹಾಕಿಸಿಕೊಂಡ ಈ ಅಭಿಮಾನಿ ತನ್ನ ನೆಚ್ಚಿನ ಸೆಲೆಬ್ರಿಟಿಯನ್ನು ಕಂಡು ರೋಮಾಂಚಿತರಾಗಿದ್ದಾರೆ.

ಇದೇ ವೇಳೆ, ತಾವು ವಿಜಯ್ ವರ್ಮಾರೊಂದಿಗೆ ಸಂಬಂಧದಲ್ಲಿ ಇರುವುದಾಗಿ ಖಾತ್ರಿಪಡಿಸಿದ್ದಾರೆ ತಮನ್ನಾ. “ವಿಜಯ್ ವರ್ಮಾ ಜೊತೆಗೆ ನಾನು ಸ್ವಾಭಾವಿಕವಾಗಿ ಹೊಂದಿಕೊಂಡಿದ್ದೇನೆ. ಆತ ನನ್ನತ್ತ ಮುಕ್ತವಾದ ಬಾಹುಗಳಿಂದ ಬಂದಿದ್ದಾನೆ, ಆತನೆಡೆಗೆ ನಾನೂ ಸಹ ಮುಕ್ತವಾಗಿ ತೆರೆದುಕೊಂಡಿದ್ದೇನೆ.” ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮನ್ನಾ ಹೇಳಿಕೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read