ಚಿಕ್ಕ ಹುಡುಗನೊಬ್ಬ ಕತ್ತರಿಸಿದ ನೀರಿನ ಬಾಟಲಿಯತ್ತ ಕಲ್ಲು ಎಸೆಯುವ ಹಾಸ್ಯಮಯ ವಿಡಿಯೋ ವೈರಲ್ ಆಗುತ್ತಿದೆ. ಒಬ್ಬ ಬಾಲಕ ದೂರದಲ್ಲಿ ಇರುವ ನೀರಿನ ಬಾಟಲಿಗೆ ಕಲ್ಲು ಹಾಕುತ್ತಿದ್ದಾನೆ. ಆ ಕಲ್ಲು ನೇರವಾಗಿ ಬಾಟಲಿಯ ಒಳಗೆ ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಅಬ್ಬಾ! ಎಷ್ಟೊಂದು ಟ್ಯಾಲೆಂಟ್ ಈ ಬಾಲಕನಿಗೆ, ಅಷ್ಟು ದೂರದಲ್ಲಿ ಇರುವ ಬಾಟಲಿಗೆ ಅದ್ಹೇಗೆ ಅಷ್ಟು ಕರೆಕ್ಟಾಗಿ ಕಲ್ಲು ಎಸೆಯುತ್ತಾನೆ ಎಂದುಕೊಂಡು ಖುಷಿ ಪಟ್ಟರೆ ಆಮೇಲೆ ಆಗಿರುವುದೇ ಬೇರೆ!
ಕ್ಯಾಮೆರಾ ಜೂಮ್ ಔಟ್ ಮಾಡಿದ ನಂತರ, ಗೊತ್ತಾಗುವುದು ಅಸಲಿಯತ್ತು. ಅದೇನೆಂದರೆ ಬಾಟಲಿಯ ಸಮೀಪ ಇನ್ನೊಬ್ಬ ಹುಡುಗ ಕುಳಿತುಕೊಂಡಿದ್ದಾನೆ. ದೂರದಲ್ಲಿ ಇರುವ ಬಾಲಕ ಕಲ್ಲು ಎಸೆದಂತೆ ಕಂಡರೂ ಆತ ನಿಜವಾಗಿ ಕಲ್ಲು ಎಸೆಯುವುದಿಲ್ಲ, ಬದಲಿಗೆ ಸಮೀಪ ಕುಳಿತ ಬಾಲಕ ಅದರಲ್ಲಿ ಕಲ್ಲು ಹಾಕುತ್ತಿರುತ್ತಾನೆ.
ಆದರೆ ದೂರದಿಂದ ನೋಡಿದಾಗ ಮಾತ್ರ ಬೇರೆಯದ್ದೇ ಕಾಣಿಸುತ್ತದೆ. ಈ ವಿಡಿಯೋವನ್ನು ಟ್ವಿಟರ್ ಖಾತೆ, ತನ್ಸು ಯೆಗೆನ್ ಹಂಚಿಕೊಂಡಿದ್ದಾರೆ. ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುವಂತಿದೆ ಈ ವಿಡಿಯೋ.
https://twitter.com/TansuYegen/status/1609606234742603776?ref_src=twsrc%5Etfw%7Ctwcamp%5Etweetembed%7Ctwterm%5E1609606234742603776%7Ctwgr%5E1d37fac6d012b7bb86fbbf29515daa92d661990a%7Ctwcon%5Es1_&ref_url=https%3A%2F%2Fwww.ndtv.com%2Foffbeat%2Ftalent-or-trick-video-of-young-boy-nailing-perfect-throws-confuses-internet-3659666