ಬಿ ರಾಜರತ್ನ ನಿರ್ದೇಶನದ ಷಣ್ಮುಖ ಜೈ ನಟನೆಯ ‘ತಾಜ್’ ಚಿತ್ರ ಇದೇ ಆಗಸ್ಟ್ 23 ರಂದು ತೆರೆ ಮೇಲೆ ಬರಲಿದೆ. ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ಲವ್ ಸ್ಟೋರಿ ಹೊಂದಿರುವ ಈ ಸಿನಿಮಾ, ಈಗಾಗಲೇ ತನ್ನ ಟೀಸರ್ ಹಾಗೂ ಟ್ರೈಲರ್ ನಿಂದಲೇ ಭರ್ಜರಿ ಸೌಂಡ್ ಮಾಡಿದೆ.
ನೈಜ ಘಟನಾಧಾರಿತ ಈ ಚಿತ್ರದಲ್ಲಿ ಷಣ್ಮುಖ ಜೈ ಅವರಿಗೆ ಜೋಡಿಯಾಗಿ ಅಪ್ಸರಾ ಅಭಿನಯಿಸಿದ್ದು, ಶೋಬರಾಜ್, ಪದ್ಮಾವಾಸಂತಿ, ವರ್ಧನ್, ಪಟ್ರೆ ನಾಗರಾಜ್, ಮೈಸೂರು ಜಗದೀಶ್, ಕಡ್ಡಿ ವಿಶ್ವ, ಮತ್ತು ಇಂಚರ ತಾರಾ ಬಳಗದಲ್ಲಿದ್ದಾರೆ. ಶ್ರೀ ಪಾವನಿ ಲಕ್ಷ್ಮಿ ಕಂಬೈನ್ಸ್ ಲಾಂಛನದಲ್ಲಿ ಶ್ರೀಮತಿ ಲಕ್ಷ್ಮೀ ಷಣ್ಮುಖ ಮತ್ತು ಯರಂಗಳ್ಳಿ ಮರಿಯಮ್ಮ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕರಾದ ಜೆಸಿ ಗಿಫ್ಟ್, ಬಿ ಆರ್ ಸುರೇಂದ್ರನಾಥ್, ಪ್ರೇಮ್ ಭರತ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಜೈ ಆರ್ಯ ನೃತ್ಯ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ, ಹಾಗೂ ಶ್ರೀ ಜವಳಿ ಅವರ ಸಂಕಲನವಿದೆ.