ಸಾರ್ವಜನಿಕರ ಸೋಗಿನಲ್ಲಿ ಬಂದು ತಹಶೀಲ್ದಾರ್ ಕಚೇರಿಯ ಪ್ರಿಂಟರ್ ಗಳನ್ನು ಕದ್ದೊಯ್ದ ಕಳ್ಳ

ತುಮಕೂರು: ಸಾರ್ವಜನಿಕರ ಸೋಗಿನಲ್ಲಿ ಬಂದ ಖತರ್ನಾಕ್ ಕಳ್ಳ ತಹಶೀಲ್ದಾರ್ ಕಚೇರಿಯ 2 ಪ್ರಿಂಟರ್ ಗಳನ್ನೇ ಕದ್ದೊಯ್ದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ತಹಶ್ಲೀದಾರ್ ಕಚೇರಿಯ ಶಿರಸ್ತೇದಾರ್ ವಿಭಾಗದಲ್ಲಿದ್ದ 2 ಪ್ರಿಂಟರ್ ಗಳನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ. ಬ್ಯಾಗ್ ನಲ್ಲಿ ಪ್ರಿಂಟರ್ ಗಳನ್ನು ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಾರ್ವಜನಿಕರ ಸೋಗಿನಲ್ಲಿ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಕಳ್ಳ ಎರಡು ಪ್ರಿಂಟರ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾನೆ. ಎರಡು ದಿನಗಳ ಹಿಂದಷ್ಟೇ ತುಮಕೂರು ನಗರದ ಸೂಪರ್ ಮಾರ್ಕೆಟ್ ನಲ್ಲಿಯೂ ಕಳ್ಳತನವಾಗಿರುವ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ಕಳ್ಳನನ್ನು ಈವರೆಗೆ ಬಂಧಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read