alex Certify ತಮಿಳುನಾಡು | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಕ್ರಿಶ್ಚಿಯನ್‌, ಧ್ವಜಾರೋಹಣ ಮಾಡುವುದಿಲ್ಲ ಎಂದ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ; ಧ್ವಜಕ್ಕೆ ಗೌರವ ಸಲ್ಲಿಸಲೂ ನಕಾರ

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ಹಾಗೂ ಗೌರವ ವಂದನೆ ಸಲ್ಲಿಸಲು ನಿರಾಕರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾನು ಕ್ರಿಶ್ಚಿಯನ್‌, ಹಾಗಾಗಿ Read more…

ರಸ್ತೆ ಮೇಲೆ ಪುಟ್ಟ ಹುಡುಗನ ಸ್ಟಂಟ್; ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲ ತಾಣದಲ್ಲಿ ಭಾರತೀಯ ಪ್ರತಿಭೆಗಳನ್ನು ಶ್ಲಾಘಿಸಲು ಮತ್ತು ಪ್ರಚಾರ ಮಾಡಲು ಹೆಸರುವಾಸಿ. ಅವರು ಇದೀಗ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ, ಚಿಕ್ಕ ಹುಡುಗ ರಸ್ತೆಯೊಂದರಲ್ಲಿ Read more…

ಮದ್ಯದ ಅಮಲಿನಲ್ಲಿ ಮಹಿಳೆಗೆ ದೊಣ್ಣೆಯಿಂದ ಹೊಡೆದು ಕೊಲೆ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ತಾನು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಆನೇಕಲ್ ತಾಲೂಕಿನ ಲಕ್ಷ್ಮಿಸಾಗರದಲ್ಲಿ ನಡೆದಿದೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ Read more…

‘ಸೋಶಿಯಲ್ ಮೀಡಿಯಾ’ ದಲ್ಲಿ ಟ್ರೆಂಡ್ ಆಯ್ತು ಚೆಸ್ ಒಲಂಪಿಯಾಡ್ ಉದ್ಘಾಟನೆ ವೇಳೆ ಮೋದಿ ಧರಿಸಿದ್ದ ಉಡುಗೆ…!

ಭಾರತದಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಟೂರ್ನಿ ನಡೆಯುತ್ತಿದ್ದು, ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಮಹಾಬಲಿಪುರಂನಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಧರಿಸಿದ್ದ Read more…

SHOCKING NEWS: ಕಬಡ್ಡಿ ಆಡುತ್ತಲೇ ಹೃದಯಾಘಾತಕ್ಕೀಡಾದ ವಿದ್ಯಾರ್ಥಿ; ಅಖಾಡದಲ್ಲಿಯೇ ದುರ್ಮರಣ

ಚೆನ್ನೈ: ಇತ್ತೀಚೆಗೆ ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆಯೇ ಕ್ರೀಡಾಪಟು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಕಬಡ್ಡಿ ಪಂದ್ಯಾವಳಿಯಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ Read more…

ʼಸಿಂಗಂʼ ಸ್ಟೈಲ್‌ ನಲ್ಲಿ ಮೀಸೆ ಬಿಟ್ಟಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ದ ನ್ಯಾಯಾಧೀಶರು ಗರಂ

ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಸೂರ್ಯ ನಟಿಸಿರುವ ʼಸಿಂಗಂʼ ಚಿತ್ರದಲ್ಲಿ ಮೀಸೆ ಚಿತ್ರಪ್ರೇಮಿಗಳ ಗಮನ ಸೆಳೆದಿತ್ತು. ಆದರೆ, ನ್ಯಾಯಾಲಯಕ್ಕೆ ಈ ಶೈಲಿ ಇಷ್ಟವಾದಂತೆ ಕಾಣಿಸಿಲ್ಲ. ತಮಿಳುನಾಡಿನ ನೀಲಗಿರಿಯಲ್ಲಿ ನಡೆದ ಪ್ರಕರಣದ Read more…

BIG BREAKING: ತಮಿಳುನಾಡು ಸಿಎಂ M.K.ಸ್ಟಾಲಿನ್ ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಕೋವಿಡ್ ಲಕ್ಷಣಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಚೆನ್ನೈನ ಕಾವೇರಿ Read more…

‘ಮೇಕಪ್’ ಮೂಲಕ ವಯಸ್ಸು ಮರೆಮಾಚಿ ಮತ್ತೊಂದು ಮದುವೆಯಾದ 54 ವರ್ಷದ ಮಹಿಳೆ…!

ಈಗಾಗಲೇ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬರು ಮತ್ತೊಂದು ಮದುವೆಯಾಗುವ ಸಲುವಾಗಿ ಚಿಕ್ಕ ಹುಡುಗಿಯಂತೆ ಕಾಣಲು ಮೇಕಪ್ ಮಾಡಿಕೊಂಡು 30 ವರ್ಷವೆಂದು ಸುಳ್ಳು ಹೇಳಿ ಮದುವೆಯಾಗಿರುವ ಘಟನೆ Read more…

12 ಸಾವಿರ ರೂ. ಮೌಲ್ಯದ ಚರ್ಮದ ಚಪ್ಪಲಿ ಬಳಸುತ್ತೆ ಈ ಆನೆ….!

ಆನೆಗೆ ಚಪ್ಪಲಿಯೇ ? ನಿಜ. ಜನರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿಯಾರು ಎಂಬುದಕ್ಕೆ ಇದೆ ಉದಾಹರಣೆ. ಆನೆಗೆ ಬೇಕೋ ಬೇಡವೋ, ಚಪ್ಪಲಿಯಂತೂ ಹಾಕಿದ್ದಾರೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ Read more…

ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತ ಗರ್ಭಿಣಿ ಸಾವು; ಪ್ರಿಯಕರನ ಬಂಧನ

15 ವರ್ಷದ ಬಾಲಕಿಯೊಬ್ಬಳು ಗರ್ಭಪಾತದ ಮಾತ್ರೆ ಸೇವಿಸಿ ಪ್ರಾಣ ಕಳೆದುಕೊಂಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂ ಬಳಿ ನಡೆದಿದೆ. ಮೃತರಾದವರು ಗರ್ಭಿಣಿಯಾಗಿದ್ದರು. ಮುರುಗನ್ ಎಂಬಾತ ಬಾಲಕಿಯನ್ನು ಪ್ರತಿನಿತ್ಯ Read more…

ತುಂಬಿದ ಸಭೆಯಲ್ಲೇ ಮಾಜಿ ಸಿಎಂ ಮೇಲೆ ಬಾಟಲಿ ಎಸೆದು ಹಲ್ಲೆಗೆ ಯತ್ನ

ಚೆನ್ನೈ: ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರ ಮೇಲೆ ವಾಟರ್ ಬಾಟಲ್ ಎಸೆಯಲಾಗಿದೆ. ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ Read more…

OMG: ಮೂಗಿನ ಹೊಳ್ಳೆಯಿಂದಲೇ ಲಾರಿಯ ಮೂರು ಟ್ಯೂಬ್‌ ಗೆ ಗಾಳಿ ತುಂಬಿಸಿ ದಾಖಲೆ….!

ಪ್ರಾಣಾಯಾಮ ಯೋಗದ ಬಗ್ಗೆ ಜಾಗೃತಿ ಮೂಡಿಸಲು ವ್ಯಕ್ತಿಯೊಬ್ಬ ತನ್ನ ಮೂಗಿನ ಹೊಳ್ಳೆಗಳ ಮೂಲಕ ಮೂರು ಲಾರಿ ಟ್ಯೂಬ್‌ಗಳಿಗೆ ಗಾಳಿಯನ್ನು 9 ನಿಮಿಷ 45 ಸೆಕೆಂಡುಗಳಲ್ಲಿ ತುಂಬಿಸಿದ್ದಾರೆ ಅಂತರಾಷ್ಟ್ರೀಯ ಯೋಗ Read more…

ಕಮಲ್‌ ಅಭಿನಯದ ‌ʼವಿಕ್ರಮ್ʼ ನಿಂದ ಬಾಹುಬಲಿ ದಾಖಲೆ ಉಡೀಸ್

ವಿಕ್ರಮ್ ಚಿತ್ರ ಹಲವು ದಾಖಲೆಗಳನ್ನು ಮುರಿದಿದ್ದು, ನಟ ಕಮಲ್ ಹಾಸನ್ ಸಂಭ್ರಮಿಸಿದ್ದಾರೆ. ಚಿತ್ರವು ವಿಶ್ವದಾದ್ಯಂತ 300 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಈಗ ತಮಿಳುನಾಡಿನಲ್ಲಿ ಬಾಹುಬಲಿ- 2 ರ ಬಾಕ್ಸ್ Read more…

10 ರೂ. ನಾಣ್ಯದ ರಾಶಿ ಸುರಿದು 6 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ ಯುವಕ..!

ಇದು ಕೆಲವು ತಿಂಗಳ ಹಿಂದಿನ ಮಾತು. ಚೆನ್ನೈನ ಯುವಕನೊಬ್ಬ ತನ್ನ ಡ್ರೀಮ್ ಬೈಕ್ ಖರೀದಿಸಲು ರಾಶಿ ರಾಶಿ ಒಂದೊಂದು ರೂಪಾಯಿ ನಾಣ್ಯ ಹೊತ್ತುಕೊಂಡು ಬೈಕ್ ಶೋ ರೂಮ್​ಗೆ ಬರುತ್ತಾನೆ. Read more…

BIG NEWS: ದೇವಾಲಯದ ರಥ ಉರುಳಿ ಇಬ್ಬರು ಭಕ್ತರ ಸಾವು

ದೇವಾಲಯದ ರಥ ಉರುಳಿ ಬಿದ್ದ ಪರಿಣಾಮ ಇಬ್ಬರು ಭಕ್ತರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ. ವೈಶಾಖಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ ಮೂವತ್ತು Read more…

ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಕ್ಯಾತೆ; ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು

ಮೇಕೆದಾಟು ಯೋಜನೆಯ ಕುರಿತು ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದೊಂದು ರಾಜಕೀಯ ಸ್ಟಂಟ್ ಎಂದು ಲೇವಡಿ ಮಾಡಿದ್ದಾರೆ. Read more…

‘ಜಿಮ್’ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದು ಬಿದ್ದು ಯುವಕ ಸಾವು

  ಯುವಕನೊಬ್ಬ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಕುಸಿದುಬಿದ್ದಿದ್ದು, ಕೂಡಲೇ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ. ಘಟನೆ ತಮಿಳುನಾಡಿನ ಮಧುರೈ ಪಾಲಂಗಂಟಂ ನಲ್ಲಿ Read more…

ನಿಂತಿದ್ದ ಕಾರ್ ನೊಳಗೇ ಕೊನೆಯುಸಿರೆಳೆದ 3 ಮಕ್ಕಳು: ಆಟವಾಡುವಾಗಲೇ ಉಸಿರುಗಟ್ಟಿ ಸಾವು

ತಮಿಳುನಾಡು(ತಿರುನೆಲ್ವೇಲಿ): ನಿಲ್ಲಿಸಿದ್ದ ಕಾರ್ ನೊಳಗೆ ಸಿಲುಕಿ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜೂನ್ 4 ರಂದು ರಾತ್ರಿ ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿಯ ಲೆಬ್ಬೈ ಕುಡಿಯಿರಿಪ್ಪು Read more…

ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಬಾಲಕಿಗೆ 14 ಬಾರಿ ಇರಿದ ಆರೋಪಿ ಶವವಾಗಿ ಪತ್ತೆ

ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಬಾಲಕಿಯನ್ನು ಹನ್ನೊಂದು ಬಾರಿ ಇರಿದಿದ್ದ ಭಗ್ನ ಪ್ರೇಮಿಯ ಶವ ರೈಲ್ವೆ ಹಳಿಮೇಲೆ ಪತ್ತೆಯಾಗಿದೆ. ತಮಿಳುನಾಡಿನ ತಿರುಚ್ಚಿಯಲ್ಲಿ 16 ವರ್ಷದ ಬಾಲಕಿ ತನ್ನ ಪ್ರೀತಿ ಒಪ್ಪಿಕೊಳ್ಳಲು Read more…

ಸೇಬು ಕದ್ದವನಿಂದ ಈಗ 2 ಕ್ರೇಟ್ ಟೊಮೆಟೊ ಕಳ್ಳತನ

ದುಬಾರಿಯಾಗಿರುವ ಟೊಮೆಟೊ ಈಗ ಸುದ್ದಿಯಲ್ಲಿದೆ. ಇಲ್ಲೊಬ್ಬ ಮಹಾಶಯ ಸೇಬು ಬೆಲೆಯಷ್ಟು ದುಬಾರಿಯಾಗಿರುವ ಟೊಮೆಟೊ ಕದ್ದು ಸಿಕ್ಕಿಬಿದ್ದಿದ್ದಾನೆ‌. ತಮಿಳುನಾಡಿನ‌ ಸೇಲಂ‌ ಜಿಲ್ಲೆ ಪೆರುಮಾಕವುಂಡಂಪಟ್ಟಿ ಗ್ರಾಮದ ತರಕಾರಿ ಅಂಗಡಿ ಮಾಲೀಕ ಶಂಕರ್ Read more…

ದುಷ್ಕರ್ಮಿಗಳಿಂದ ಬಿಜೆಪಿ ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷನ ಹತ್ಯೆ

ಚೆನ್ನೈ: ತಮಿಳುನಾಡು ಕೇಂದ್ರ ಜಿಲ್ಲಾ ಬಿಜೆಪಿಯ ಎಸ್‌ಸಿ/ಎಸ್‌ಟಿ ವಿಭಾಗದ ಅಧ್ಯಕ್ಷ ಬಾಲಚಂದ್ರನ್ ಅವರನ್ನು ಚೆನ್ನೈನ ಚಿಂತಾದ್ರಿಪೇಟ್‌ ನಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಬೆಳವಣಿಗೆಯ ಕುರಿತು Read more…

ಸಾರ್ವಜನಿಕ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್ ವೆಂಡಿಂಗ್ ಮಶಿನ್ ಅಳವಡಿಸಿದ ಐಎಎಸ್ ಅಧಿಕಾರಿ

ಇಡೀ ವಿಶ್ವದಾದ್ಯಂತ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕೂಗು ಹೆಚ್ಚಾಗುತ್ತಿದೆ. ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಪಣ ತೊಡಲಾಗಿದೆ. ಆದರೆ, ಪ್ಲಾಸ್ಟಿಕ್ ಬ್ಯಾಗ್ Read more…

Big Shocking News: ಕಟ್ಟದ ಮನೆಗಳಿಗೆ ಬಿಡುಗಡೆಯಾಯ್ತು ಕೋಟ್ಯಾಂತರ ರೂಪಾಯಿ

ಕಾಮಗಾರಿಯನ್ನು ಮಾಡದಿದ್ದರೂ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಾರದರ್ಶಕ ಆಡಳಿತಕ್ಕೆ Read more…

ಸಿನಿಮಾ ಸ್ಟೋರಿಯಂತಿದೆ ಈ ಮಹಿಳೆ ಜೀವನ, ಮಗಳಿಗಾಗಿ 36 ವರ್ಷ ‘ಅಪ್ಪ’ನಾಗಿದ್ದ ‘ಅಮ್ಮ’

ತಮಿಳುನಾಡಿನ ತೂತುಕುಡಿಯ 57 ವರ್ಷದ ಮಹಿಳೆಯೊಬ್ಬರು 36 ವರ್ಷಗಳಿಂದ ಪುರುಷ ವೇಷ ಧರಿಸಿದ್ದರು. ತನ್ನ ಮಗಳಿಗಾಗಿ ಈ ರೀತಿ ವೇಷ ಮರೆಸಿಕೊಂಡಿದ್ದರು. ಕಟ್ಟುನಾಯಕನಪಟ್ಟಿ ಗ್ರಾಮದವರಾದ ಪೆಚ್ಚಿಯಮ್ಮಾಳ್ ಅವರು ತಮ್ಮ Read more…

ತಮಿಳುನಾಡಿನಲ್ಲಿ ಅಸ್ಪೃಶ್ಯತೆ ಆಚರಣೆ ಕುರಿತಂತೆ ಶಾಕಿಂಗ್‌ ಮಾಹಿತಿ ಬಹಿರಂಗ

ಆರ್.​​ಟಿ.ಐ. ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ತಮಿಳುನಾಡಿನಲ್ಲಿ ಅಸ್ಪೃಶ್ಯತೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿದೆ ಎಂಬುದನ್ನು ತೋರಿಸಿದೆ. ಈ ಸಮಸ್ಯೆಗೆ ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ ಪಕ್ಷಗಳು ಕಾರಣ ಎಂದು ಬಿಜೆಪಿ ಆರೋಪಿಸಿದೆ. Read more…

ಶತಮಾನಗಳಷ್ಟು ಹಳೆಯ ಚೈನೀಸ್ ಪಿಂಗಾಣಿ ಪತ್ತೆ ಹಚ್ಚಿದ ಶಾಲಾ ವಿದ್ಯಾರ್ಥಿಗಳು

ತಮಿಳುನಾಡಿನ ವಿದ್ಯಾರ್ಥಿಗಳ ತಂಡ ಶತಮಾನಗಳಷ್ಟು ಹಳೆಯದಾದ ಚೈನೀಸ್ ಪಿಂಗಾಣಿ ಪತ್ತೆ ಮಾಡಿದ್ದು, ಸಂಶೋಧನೆಗೆ ಹೊಸ ಹೊಳಹು ನೀಡಿದ್ದಾರೆ. 10ನೇ ತರಗತಿ ಐವರು ವಿದ್ಯಾರ್ಥಿಗಳು ರಾಮನಾಥಪುರಂ ಜಿಲ್ಲೆಯ ಪೊಕ್ಕನರೆಂದಲ್ ಮತ್ತು Read more…

ಸಂಗಾತಿಯ ಖಾಸಗಿ ಫೋಟೋ ಪೋಸ್ಟ್ ಮಾಡಿದ ಕಿಡಿಗೇಡಿ ಅರೆಸ್ಟ್

ತಿರುಪ್ಪೂರ್: ಜಾತಿ ನಿಂದನೆ ಮತ್ತು ಒಪ್ಪಿಗೆಯಿಲ್ಲದೆ ಮಹಿಳೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ ಲೋಡ್ ಮಾಡಿದ ಆರೋಪದ ಮೇಲೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ 23 ವರ್ಷದ ಯುವಕನನ್ನು Read more…

ಚಲಿಸುತ್ತಿದ್ದ ಬಸ್‍ನಿಂದ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

ಚೆನ್ನೈ: ಚಲಿಸುತ್ತಿದ್ದ ಖಾಸಗಿ ಬಸ್‌ನಿಂದ ಬಿದ್ದು 15 ವರ್ಷದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ತಮಿಳುನಾಡಿನ ನಾಮಕ್ಕಲ್‌ನಲ್ಲಿ  ನಡೆದಿದೆ. ಬಾಲಕಿಯು ಇಂಗ್ಲೀಷ್ ಪರೀಕ್ಷೆ ಬರೆಯಲು ಖಾಸಗಿ ಬಸ್ ನಲ್ಲಿ Read more…

ʼತಾಯಂದಿರ ದಿನʼದಂದು ಇಡ್ಲಿ ಅಮ್ಮನಿಗೆ ಆನಂದ್ ಮಹೀಂದ್ರಾರಿಂದ ಮನೆ ಗಿಫ್ಟ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಾವು ಹೇಳಿದ ಮಾತಿಗೆ ಬದ್ಧರಾಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. 2021ರ Read more…

ಚಾಲಕನಿಂದಲೇ ಘೋರ ಕೃತ್ಯ: ಅಮೆರಿಕದಿಂದ ಬಂದ ವೃದ್ಧ ದಂಪತಿ ಹತ್ಯೆಗೈದು ಅವರ ತೋಟದಲ್ಲೇ ಹೂತಿಟ್ಟ

ಚೆನ್ನೈ: 10 ತಿಂಗಳ ನಂತರ ಅಮೆರಿಕದಿಂದ ವಾಪಸಾದ ವೃದ್ಧ ದಂಪತಿಯನ್ನು ಅವರ ಚಾಲಕನೇ ಕೊಲೆ ಮಾಡಿ ಅವರಿಗೆ ಸೇರಿದ ತೋಟದ ಮನೆಯಲ್ಲಿ ಹೂತು ಹಾಕಿದ್ದಾನೆ. ಚಾಲಕನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...